More

    ಅಸ್ಪೃಶ್ಯತೆ, ತಾರತಮ್ಯ ನೀತಿ ಜೀವಂತ

    ಮೊಳಕಾಲ್ಮೂರು: ಭಾರತೀಯರು ಜಾತ್ಯತೀತ ನಿಲುವು, ಪರಸ್ಪರ ಸಹಭಾಳ್ವೆ, ಸಮಾನತೆ ಅಳವಡಿಸಿಕೊಳ್ಳಬೇಕೆಂಬ ಆಶಯ ಡಾ.ಬಿ.ಆರ್.ಅಂಬೇಡ್ಕರ್ ಅವರದ್ದಾಗಿತ್ತು.

    ಆದರೆ, ಅವರ ಕನಸು ನನಸಾಗಿಲ್ಲ ಎಂದು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ, ದಲಿತ ಮುಖಂಡ ಗುಜ್ಜಾರಪ್ಪ ವಿಷಾದಿಸಿದರು.

    ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ

    ಹಾಗೂ ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಕಠಿಣ ಕಾನೂನು ಸೇವೆಗಳು ಜಾರಿಯಲ್ಲಿದ್ದರೂ ಅಸ್ಪೃಶ್ಯತೆ, ತಾರತಮ್ಯ ನೀತಿ ಸಮಾಜದಲ್ಲಿ ಜೀವಂತವಾಗಿದೆ ಎಂದು ಬೇಸರಿಸಿದರು.

    ಅವುಗಳಿಂದ ಮುಕ್ತರಾಗಲು ಪ್ರತಿ ಮನೆ ಮಕ್ಕಳು ಉತ್ತಮ ಶಿಕ್ಷವಂತರಾಗಬೇಕಿದೆ. ಕೆಳಹಂತದ ಸಮುದಾಯಗಳ ಪ್ರಗತಿಗೆ ಶಾಸನ ಬದ್ಧವಾಗಿರುವ ಕಾನೂನಾತ್ಮಕ ಸೇವೆಗಳನ್ನು ಸಮರ್ಥವಾಗಿ ಬಳಸಬೇಕಿದೆ ಎಂದರು.

    ಅಕ್ಷರ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಡಿ.ಓ.ಮುರಾರ್ಜಿ ಮಾತನಾಡಿ, ಜಗತ್ತು ಬೆಳೆದಂತೆಲ್ಲ ಪ್ರಜ್ಞಾವಂತ ನಾಗರಿಕ ಸಮಾಜವನ್ನು ಕಾಣುತ್ತಿದ್ದೇವೆ.

    ಅದಕ್ಕೆ ಪೂರಕವಾಗಿ ತಳ ಸಮುದಾಯಗಳು ಸಾಮಾಜಿಕ ಭದ್ರತೆ, ಶೈಕ್ಷಣಿಕ ಸೌಲಭ್ಯ ಹಾಗೂ ಆರ್ಥಿಕ ಸಬಲೀಕರಣ ಹೊಂದಲು ಮುಂದಾಗಬೇಕು ಎಂದು ತಿಳಿಸಿದರು.

    ಸಮಾಜ ಕಲ್ಯಾಣಾಧಿಕಾರಿ ಮಾಲತಿ, ಪಿಡಿಒ ಹೊನ್ನೂರಪ್ಪ, ವಾರ್ಡನ್ ಹಾಲೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯರಾದ ಓ.ಕರಿಬಸಪ್ಪ, ನಾಗಭೂಷಣ, ಹೇಮಣ್ಣ, ದಾಸಪ್ಪ, ಗಂಗಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts