More

    ಕರೊನಾ ಲಸಿಕೆ ಪಡೆದ ಧರ್ಮಗುರು ದಲೈ ಲಾಮಾ

    ಧರ್ಮಶಾಲಾ: ಬೌದ್ಧ ಧರ್ಮಗುರು, ಟಿಬೆಟಿಯನ್ ಆಧ್ಯಾತ್ಮಿಕ ಚಿಂತಕ ದಲೈ ಲಾಮಾ ಅವರು ಇಂದು ಕರೊನಾ ಲಸಿಕೆ ಪಡೆದಿದ್ದಾರೆ. ಸಮಾಜದ ಒಳಿತಿನ ದೃಷ್ಟಿಯಿಂದ ಎಲ್ಲರೂ ಲಸಿಕೆ ಪಡೆಯಲು ಧೈರ್ಯದಿಂದ ಮುಂದೆ ಬನ್ನಿ ಎಂದು ಅವರು ಜನರಿಗೆ ಕರೆ ನೀಡಿದ್ದಾರೆ.

    ಕಳೆದ ವರ್ಷ ಜನವರಿಯಿಂದ ತಮ್ಮ ಮನೆಯಲ್ಲೇ ಸೆಲ್ಫ್ ಕ್ವಾರಂಟೇನ್​ನಲ್ಲಿದ್ದ 86 ವರ್ಷ ವಯಸ್ಸಿನ ದಲೈ ಲಾಮಾ, ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದ ಜೋನಲ್ ಹಾಸ್ಪಿಟಲ್​ಗೆ ಭೇಟಿ ನೀಡಿದರು. ಬೆಳಿಗ್ಗೆ 7.10 ರ ಸುಮಾರಿಗೆ ಕರೊನಾ ಲಸಿಕೆಯ ಪ್ರಥಮ ಡೋಸ್ ಪಡೆದರು. ಲಸಿಕೆ ಪಡೆದ ನಂತರ ಅರ್ಧ ಗಂಟೆ ಅವರನ್ನು ಪರಿವೀಕ್ಷಣೆಯಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!

    ಲಸಿಕೆ ಪಡೆದ ಸಂದರ್ಭದಲ್ಲಿ ಮಾತನಾಡಿರುವ ದಲೈ ಲಾಮಾ, ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವ ದೃಷ್ಟಿಯಿಂದ ಈ ಇಂಜೆಕ್ಷನ್ ತುಂಬಾ ಸಹಾಯಕ ಮತ್ತು ಒಳ್ಳೆಯದು. ಹೆಚ್ಚಿನ ಒಳಿತಿನ ದೃಷ್ಟಿಯಿಂದ ಬೇರೆ ರೋಗಿಗಳು ಕೂಡ ಈ ಇಂಜೆಕ್ಷನ್​ಅನ್ನು ಪಡೆಯಬೇಕು. ನಾನು ಈಗಷ್ಟೆ ತೆಗೆದುಕೊಂಡೆ. ಹೆಚ್ಚು ಜನರು ಈ ಇಂಜೆಕ್ಷನ್ ಪಡೆಯಲು ಧೈರ್ಯ ವಹಿಸಬೇಕು” ಎಂದಿದ್ದಾರೆ.

    ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಈಗ 589 ಆ್ಯಕ್ಟೀವ್ ಕರೊನಾ ಪ್ರಕರಣಗಳಿವೆ. ಈವರೆಗೆ 57,428 ಜನ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದು, 997 ಕರೊನಾ ಸಾವುಗಳು ರಾಜ್ಯದಲ್ಲಿ ಈವರೆಗೆ ವರದಿಯಾಗಿವೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

    ಟಿಎಂಸಿಗೆ ಮತ್ತೆ ಶಾಕ್​! ದೀದಿ ಪಕ್ಷದ ಹಿರಿಯ ನಾಯಕ ಬಿಜೆಪಿ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts