More

    ಬಾಲಕನಿಗೆ ಚುಂಬಿಸಿದ ಪ್ರಕರಣ; ಕುಟುಂಬಸ್ಥರ ಕ್ಷಮೆಯಾಚಿಸಿದ ದಲೈ ಲಾಮಾ

    ನವದೆಹಲಿ: ಬೌದ್ಧ ಧರ್ಮದ ಜಗದ್ಗುರು ದಲೈ ಲಾಮಾ ಬಾಲಕನ ತುಟಿಗೆ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಕ್ಷಮೆಯಾಚಿಸಿದ್ದಾರೆ.

    ನನ್ನನು ಭೇಟಿಯಾಗುವ ಜನರ ಜೊತೆಗೆ ನಾನು ಹೀಗೆ ಕೀಎಲೆ ಮಾಡುತ್ತಿರುತ್ತೇನೆ. ನನ್ನ ಈ ನಡೆಯಿಂದ ಮನಸ್ಸಿಗೆ ನೋವಾಗಿದ್ದರೆ ನಾನು ಆ ಹುಡುಗ ಹಾಗೂ ಆತನ ಕುಟುಂಬಸ್ಥರಿಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

    ಟ್ವೀಟ್​ ಮೂಲಕ ಕ್ಷಮೆಯಾಚನೆ

    ಈ ಕುರಿತು ಟ್ವೀಟ್​ ಮಾಡಿರುವ ದಲೈ ಲಾಮಾ ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಾನು ಆಡಿರುವ ಮಾತುಗಳು ಹಾಗೂ ನನ್ನ ನಡತೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನನ್ನ ಭೇಟಿ ಮಾಡಲು ಬರುವ ಜನರೊಂದಿಗೆ ನಾನು ಈಗೆ ಕೀಟಲೆ ಮಾಡುತ್ತಾ ತಮಾಷೆಯಿಂದ ಮಾತನಾಡುತ್ತಿರುತ್ತೇನೆ ಎಂದು ಟ್ವೀಟ್​ ಮಾಡಿ ಘಟನೆ ಕುರಿತು ವಿಷಾದಿಸಿದ್ದಾರೆ.

    ಇದನ್ನೂ ಓದಿ: VIDEO| ತೀವ್ರ ಟೀಕೆಗೆ ಗುರಿಯಾಯ್ತು ಬೌದ್ಧ ಧರ್ಮದ ಗುರುವಿನ ಈ ಒಂದು ಅವಾಂತರ!

    ತೀವ್ರವಾಗಿ ಖಂಡನೆ

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದ ವಿಡಿಯೋದಲ್ಲಿ ದಲೈ ಲಾಮಾ ಬಾಲಕನಿಗೆ ಚುಂಬಿಸಿ ನಂತರ ಅವರ ನಾಲಿಗೆಯನ್ನು ಚೀಪುವಂತೆ ಹೇಳುತ್ತಿರುವುದು ಕಂಡು ಬರುತ್ತದೆ.

    ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು ಮತ್ತು ಅವರನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಆಗ್ರಹಿಸಿದ್ದರು.

    ಇದೇ ಮೊದಲಲ್ಲ

    2019ರಲ್ಲಿ BBCಗೆ ನೀಡಿದ್ದ ಸಂದರ್ಶನದಲ್ಲಿ ದಲೈಲಾಮಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ತಮ್ಮ ಉತ್ತರಾಧಿಕಾರಿ ಒಬ್ಬ ಸುಂದರವಾದ ಮಹಿಳೆಯಾಗಿರಬೇಕು ಮಹಿಳಾ ದಲೈ ಲಾಮಾ ಹೆಚ್ಚು ಆಕರ್ಷಿನಿಯವಾಗಿರಬೇಕು ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು.

    ಇದೀಗ ಬಾಲಕನೊಬ್ಬನಿಗೆ ಚುಂಬಿಸುವ ಮೂಲಕ ಸುದ್ದಿಯಲ್ಲಿರುವ ಬೌದ್ಧ ಧರ್ಮ ಗುರು ಮುಂದಿನ ದಿನಗಳಲ್ಲಿ ಯಾವ ವಿಚಾರವಾಗಿ ಹೊಸ ವಿವಾದವನ್ನು ಸೃಷ್ಟಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts