More

    ಶಬ್ಧ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು ಪ್ರಕರಣ; ಗರ್ಭಿಣಿ ಮೃತ್ಯು

    ನವದೆಹಲಿ: ಡಿಜೆ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ ಗರ್ಭಿಣಿ ಮೇಲೆ ನೆರೆಯ ಮನೆಯವರು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ,ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮಹಿಳೆಯ ಹೆಸರು ರಂಜು(30) ಎಂದು ತಿಳಿದು ಬಂದಿದ್ದು ಪ್ರಕರಣ ಸಂಬಂಧ ಆರೋಪಿಗಳಾದ ಅಮಿತ್​ ಹಾಗೂ ಹರೀಶ್​ನನ್ನು ವಶಕ್ಕೆ ಪಡೆದಿದ್ದರು.

    ಜೀವನ್ಮರಣ ಹೋರಾಟ

    ಘಟನೆಯ ನಂತರ ಮಹಿಳೆಯನ್ನು ಸಿರಸ್​​ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದರು.

    ಶನಿವಾರ ಸಂಜೆ ಕರೆ ಮಾಡಿದ ವೈದ್ಯರು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು!

    ಪ್ರಕರಣದ ಹಿನ್ನಲೆ

    ಡಿಜೆ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ ಮಹಿಳೆ ಮೇಲೆ ನೆರೆಯ ಮನೆಯವರು ಗುಂಡು ಹಾರಿಸಿದ್ದರು. ಪ್ರಕರಣ ಸಂಬಂಧ ಆರೋಪಿಗಳಾದ ಅಮಿತ್​ ಹಾಗೂ ಹರೀಶ್​ನನ್ನು ವಶಕ್ಕೆ ಪಡೆದಿದ್ದರು.

    ಆರೋಪಿಗಳಾದ ಹರೀಶ್​ ಹಾಗೂ ಅಮಿತ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 302(ಕೊಲೆ), 34(ಸಾಮಾನ್ಯ ಉದ್ದೇಶ), 27(ಶಸ್ತ್ರಾಸ್ತ್ರ ಕಾಯ್ದೆ) ಅಡಿ ಪ್ರಕರಣವನ್ನು ದಾಖಲಿಸಿಕೊಂಡು ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಡಿಸಿಪಿ ರವಿಕುಮಾರ್​ ಸಿಂಗ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts