More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 183 ಮಂದಿ ಡಿಸ್ಚಾರ್ಜ್

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಶನಿವಾರ 194 ಕೋವಿಡ್ ಪಾಸಿಟಿವ್ ಪ್ರಕರಣ ಹಾಗೂ 6 ಸಾವಿನ ಪ್ರಕರಣ ವರದಿಯಾಗಿದೆ. ಒಂದೇ ದಿನ 183 ಮಂದಿ ಕರೊನಾದಿಂದ ಚೇತರಿಸಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
    ಮಂಗಳೂರಿನ 129, ಬಂಟ್ವಾಳದ 15, ಬೆಳ್ತಂಗಡಿ ಹಾಗೂ ಪುತ್ತೂರಿನ ತಲಾ 16, ಸುಳ್ಯದ 7, ಹೊರಜಿಲ್ಲೆಗಳ 11 ಮಂದಿಗೆ ಕರೊನಾ ಸೋಂಕು ತಗುಲಿದೆ. 98 ಮಂದಿ ಐಎಲ್‌ಐ ಲಕ್ಷಣ ಹೊಂದಿದ್ದರೆ 12 ಮಂದಿಗೆ ತೀವ್ರ ಉಸಿರಾಟದ ತೊಂದರೆ ಬಾಧಿಸಿತ್ತು. 15 ಮಂದಿಗೆ ನೇರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಬಾಧಿಸಿದ್ದರೆ 69 ಮಂದಿಯ ಸೋಂಕು ಮೂಲ ಶೋಧ ನಡೆದಿದೆ.
    ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ 7075 ತಲಪಿದ್ದರೆ ಅದರಲ್ಲಿ ಸಕ್ರಿಯ ಪ್ರಕರಣ 3374. 3487 ಮಂದಿ ಒಟ್ಟು ಬಿಡುಗಡೆಯಾದವರು. ಮೃತರಾದವರ ಸಂಖ್ಯೆ 214ಕ್ಕೇರಿದೆ. ಶನಿವಾರ ಮೃತಪಟ್ಟ ಎಲ್ಲ 6 ಮಂದಿಯೂ ಮಂಗಳೂರಿನವರು.

    ಕಾಸರಗೋಡಿನಲ್ಲಿ 73
    ಕಾಸರಗೋಡು: ಜಿಲ್ಲೆಯ 73 ಮಂದಿ ಒಳಗೊಂಡಂತೆ ಕೇರಳದಲ್ಲಿ ಶನಿವಾರ 1420 ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಕಾಸರಗೋಡು ಉಪ್ಪಳ ನಿವಾಸಿಯೋರ್ವ ಸೇರಿ ರಾಜ್ಯದಲ್ಲಿ 24 ತಾಸುಗಳಲ್ಲಿ ಕೋವಿಡ್ ಬಾಧಿಸಿ ನಾಲ್ವರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts