More

    ಎಚ್ಚರಿಕೆ, ಎಚ್ಚರಿಕೆ.. ಸಮುದ್ರದ ಹವಾಮಾನ ಕೆಟ್ಟುಹೋಗಿದೆ; ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

    ಮಂಗಳೂರು: ರಾಜ್ಯದಲ್ಲಿ ಮೇ 16ರಂದು ಚಂಡಮಾರುತ ಬೀಸಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದ್ದರೂ, ಮಂಗಳೂರಿನಲ್ಲಿ ಮೂರು ದಿನಗಳ ಮುನ್ನವೇ ಎಚ್ಚರಿಕೆ ನೀಡಲಾಗುತ್ತಿದೆ. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿರುವವರನ್ನು ಕರೆದು ಬೇಗ ದಡ ಸೇರಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.

    ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಅರಬ್ಬೀ ಸಮುದ್ರದಲ್ಲಿ ಘೋಷಣೆ ಮಾಡುವ ಮೂಲಕ ಮೀನುಗಾರರ ರಕ್ಷಣೆಗಾಗಿ ಸೂಚನೆ ನೀಡಲಾರಂಭಿಸಿದ್ದಾರೆ. ‘ಮೀನುಗಾರರೇ, ಮೀನುಗಾರರೇ.. ಸಮುದ್ರದ ಹವಾಮಾನ ಕೆಟ್ಟುಹೋಗಿದೆ, ಬೇಗ ಬೇಗ ದಡ ಸೇರಿಕೊಳ್ಳಿ..’ ಎಂಬುದಾಗಿ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಎಲ್ಲರೂ ಆದಷ್ಟು ಬೇಗ ಹತ್ತಿರದ ಬಂದರನ್ನು ಸೇರಿಕೊಳ್ಳಿ ಎಂಬುದಾಗಿ ಸಂದೇಶ ರವಾನಿಸಿದ್ದಾರೆ.

    ಇದನ್ನೂ ಓದಿ: ಗಾರೆ ಕೆಲಸಗಾರರೊಬ್ಬರ ಪ್ರಾಣ ತೆಗೆದ ‘ಲೇಡಿ-ಡಾಗ್’; ಜೀವಕ್ಕೇ ಕುತ್ತು ತಂತು ಕುತ್ತಿಗೆಗೆ ಕಚ್ಚಿದ ನಾಯಿ!

    ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ. ವಾಯುಭಾರತ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮೇ 16ರಂದು ರಾಜ್ಯದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಮೂನ್ಸೂಚನೆ ನೀಡಿದೆ.

    ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಕ್ರಿಕೆಟ್​ ಕಿರಿಕ್​ಗೆ ಉರುಳಿತು ಜೀವಂತ ವಿಕೆಟ್​; ಕಾರ್​ ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ!

    ಮೇ 16ರಂದು ರಾಜ್ಯಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರಿ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts