More

    ಅಸನಿ ಚಂಡಮಾರುತ ಎಫೆಕ್ಟ್​: ವಿಮಾನ ಹಾರಾಟ ಸ್ಥಗಿತ

    ನವದೆಹಲಿ: ಚಂಡಮಾರುತದಿಂದಾಗುವ ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಪೂರ್ವ ಕರಾವಳಿಯಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆಂದ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಇಂದು ರಾತ್ರಿ ಚಂಮಾಡುತ ಬಂದಪ್ಪಳಿಸುವುದರಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.

    ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಯಾವುದೇ ವಿಮಾನ ಸಂಚಾರ ನಡೆಸಿಲ್ಲ, 23 ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ನಾಲ್ಕು ಏರ್​ ಏಶಿಯಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

    ಅಸನಿ ಚಂಡಮಾರುತದ ಅಲೆಗಳು ಕರಾವಳಿ ಸಮೀಪದಲ್ಲಿದ್ದು, ಭಾರೀ ವೇಗದಲ್ಲಿ ಧಾವಿಸುತ್ತಿದೆ. ಸಂಜೆಯಿಂದಲೇ ಭಾರೀ ಮಳೆಯಾಗಲಿದ್ದು, ಸಮುದ್ರದ ಅಲೆಗಳು ಎತ್ತರದಲ್ಲಿರಲಿವೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

    ನಡುವೆ ಉತ್ತರ ಭಾರತದಾದ್ಯಂತ ಪ್ರಸ್ತುತ ಇರುವ ತಾಪಮಾನದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಚಂಡಮಾರುತ ಅಪ್ಪಳಿಸದ ಬಳಿಕ ಸ್ವಲ್ಪ ಮಟ್ಟಿಗೆ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    19ನೇ ಶತಮಾನದಲ್ಲಿ ಕಳ್ಳತನವಾದ ಭಾರತದ ರಾಜನ ವಜ್ರದ ನೆಕ್ಲೆಸ್​ ಧರಿಸಿ ವಿವಾದಕ್ಕೀಡಾದ ಹಾಲಿವುಡ್​​ ಯೂ ಟ್ಯೂಬ್​ ಸ್ಟಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts