More

    ಬಿಜೆಪಿ ಶಾಸಕನಿಗೆ ಖಡಕ್​ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!

    ಹೈದರಾಬಾದ್​: ಪೊಲೀಸರು ಆಡಳಿತ ಪಕ್ಷದ ತುತ್ತೂರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ರಾಜಾ ಸಿಂಗ್​ಗೆ ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ ಶಾಸಕರು ಅನವಶ್ಯಕವಾಗಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪೊಲೀಸರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸಲಾಗುವುದು. ರಾಜಾ ಸಿಂಗ್​ ಹೇಳಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಜ್ಜನರ್​ ಹೇಳಿದ್ದಾರೆ. ಪ್ರಸ್ತುತ ಇನ್ಸ್ಟೆಂಟ್​ ಲೋನ್​ ಆ್ಯಪ್​ಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಉದ್ದೇಶಿಸಿ ಬಿಜೆಪಿ ಶಾಸಕ ನೀಡಿದ್ದ ಹೇಳಿಕೆಗೆ ಸಜ್ಜನರ್​ ಸರಿಯಾದ ತಿರುಗೇಟು ನೀಡಿದರು.

    ಇದನ್ನೂ ಓದಿ: 28 ವರ್ಷ ಬಳಿಕ ದೊರೆತ ನ್ಯಾಯ; ಫಾದರ್ ಥಾಮಸ್ ಕೊಟ್ಟೂರ್, ಸಿಸ್ಟರ್ ಸೆಫಿ ಅಪರಾಧಿಗಳೆಂದ ಕೋರ್ಟ್

    ಇದೇ ವೇಳೆ ಇನ್ಸ್ಟೆಂಟ್​ ಲೋನ್ ಆ್ಯಪ್​ ಹಗರಣ ಕುರಿತು ಮಾತನಾಡಿದ ಅವರು ಲೋನ್​ ಆ್ಯಪ್​ಗಳ​ ವಿರುದ್ಧ ದೂರುಗಳನ್ನು ಸ್ವೀಕರಿಸಿದ್ದೇವೆ. ಕ್ಯಾಶ್​ ಮಾಮಾ, ಲೋನ್​ ಝೋನ್​ ಮತ್ತು ಧನಾಧನ್​ ಹೆಸರಿನಲ್ಲಿ ಸಾಲ ಕೊಡಲಾಗುತ್ತದೆ. ಇನ್ಸ್ಟೆಂಟ್​ ಲೋನ್ಸ್​ ಬಗ್ಗೆ ಆರ್​ಬಿಐ ಸಹ ಗಂಭೀರವಾಗಿ ಪರಿಗಣಿಸಿದೆ. ರಾಯದುರ್ಗದಲ್ಲಿ ಎರಡು ಕಂಪನಿಗಳನ್ನು ಗುರುತಿಸಲಾಗಿದ್ದು, ಸುಮಾರು 110ಕ್ಕೂ ಹೆಚ್ಚು ಟೆಲಿಕಾಲರ್ಸ್​ ಕೆಲಸ ಮಾಡುತ್ತಿದ್ದಾರೆ. ದಾಳಿ ವೇಳೆ 1.52 ಕೋಟಿ ಮೌಲ್ಯದ ಲ್ಯಾಪ್​ಟಾಪ್​, 22 ಫೋನ್​ ಮತ್ತು 18 ಬ್ಯಾಂಕ್​ ಖಾತೆಗಳನ್ನು ಸೀಜ್​ ಮಾಡಿದ್ದೇವೆಂದು ತಿಳಿಸಿದರು.

    ಇನ್ಸ್ಟೆಂಟ್​ ಲೋನ್​ ಆ್ಯಪ್ಸ್​ ಮೂಲಕ ನಡೆಯುತ್ತಿರುವ ಹಗರಣ ಕುರಿತು ಮಾತನಾಡಿರುವ ಸಜ್ಜನರ್​, ಇಂತಹ ಆ್ಯಪ್​ಗಾಗಿ ಕೆಲಸ ಮಾಡುತ್ತಿರುವ ಕಾಲ್​ ಸೆಂಟರ್​ಗಳನ್ನು ಸೀಜ್​ ಮಾಡಿದ್ದೇವೆ. ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ 1,100 ಉದ್ಯೋಗಿಗಳಿಗೆ ನೋಟಿಸ್​ ನೀಡಿದ್ದೇವೆ ಬೇಗುಂಪೇಟ್​ ಮತ್ತು ಪಂಜಗುಟ್ಟ ಕಾಲ್​ ಸೆಂಟರ್​ಗಳ ಮೇಲೆ ದಾಳಿ ಮಾಡಿದಾಗ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!

    ಇಂತಹ ಲೋನ್​ ಆ್ಯಪ್​ಗಳಿಂದ ದೇಶಾದ್ಯಂತ ಕಿರುಕುಳ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇಂತಹ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬೇಡಿ. ಒಂದು ವೇಳೆ ಏನೇ ಸಮಸ್ಯೆಯಾದರೂ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿ ಎಂದು ಸಜ್ಜನರ್​ ಮನವಿ ಮಾಡಿದರು. (ಏಜೆನ್ಸೀಸ್​)

    ‘ಸಜ್ಜನರ’ ಕೆಲಸ ಎಂದರೆ ಇದು.. ಬಾಂಗ್ಲಾ ಟು ಹೈದರಾಬಾದ್​, ಆ ರಾತ್ರಿ ಏನಾಯ್ತು?

    ರೂಪಾಂತರಿ ಭಯ ಬೇಡ; ಹೊಸ ಪ್ರಭೇದ ವೈರಸ್ ಹೆಚ್ಚು ತೀಕ್ಷ್ಣತೆ ಕಂಡಿಲ್ಲ ಎಂದು ತಜ್ಞರ ಅಭಿಮತ

    ದೇಶಾದ್ಯಂತ ರೈತ ಮುಖಂಡರ ಸಭೆ; ಮಾತುಕತೆ, ಇಂದು ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts