More

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ನಿರುದ್ಯೋಗಿಗಳಿಗೆ ಅರೆಕಾಲಿಕ (ಪಾರ್ಟ್‌ ಟೈಂ) ಉದ್ಯೋಗ ನೀಡುವುದಾಗಿ ಚೀನಾ ಮೂಲದ ‘ಕೀಪ್‌ಶೇರ್’ ಎಂಬ ಆ್ಯಪ್ ಮೂಲಕ ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಗೆ ಸೇರಿದ 12 ಕೇಂದ್ರಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಕೇಂದ್ರಗಳಲ್ಲಿದ್ದ ಅಕ್ರಮ ದಾಖಲೆಗಳು ಹಾಗೂ 5.85 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ. ಇತ್ತೀಚೆಗೆ ಚೀನಾ ಮೂಲದ ಕಂಪನಿಯ ವಂಚನೆಗೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಕಂಪನಿ ಅಕ್ರಮ ಹಣ ವ್ಯವಾಹರ ನಡೆಸಿದ ಆರೋಪ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಂಪನಿಯ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದೆ.

    ಚೀನಾ ಮೂಲದ ‘ಕೀಪ್‌ಶೇರ್’ ಎಂಬ ಮೊಬೈಲ್ ಆ್ಯಪ್ ಮೂಲಕ ವಂಚಕರು, ಯುವ ಸಮುದಾಯವನ್ನು ಪಾರ್ಟ್ ಟೈಂ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಹಣ ಪಡೆಯುತ್ತಿದ್ದರು. ಆದರೆ, ಉದ್ಯೋಗ ಕೊಡಿಸದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ವಂಚಿಸುತ್ತಿದ್ದರು. ಈ ಕಂಪನಿಗಳಿಗೆ ಭಾರತೀಯರೇ ನಿರ್ದೇಶಕರು!

    ಚೀನಾ ಮೂಲದ ವ್ಯಕ್ತಿಗಳು ಭಾರತದಲ್ಲಿ ಕೆಲವೊಂದು ಕಂಪನಿಗಳು ತೆರೆದಿದ್ದರು. ಅವುಗಳಿಗೆ ಭಾರತೀಯ ಮೂಲಕ ನಿರ್ದೇಶಕರು, ಅನುವಾದಕರು (ಆಯಾ ಸ್ಥಳೀಯ ಭಾಷೆಯವರಿಗೆ ಮಾಹಿತಿ ನೀಡಲು), ಮಾನವ ಸಂಪನ್ಮೂಲ ವಿಭಾಗ (ಎಚ್‌ಆರ್) ವ್ಯವಸ್ಥಾಪಕರು, ಟೆಲಿಕಾಲರ್‌ಗಳು ನೇಮಿಸುತ್ತಿದ್ದರು. ಅಲ್ಲದೆ, ಈ ವ್ಯಕ್ತಿಗಳ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿ ಎಲ್ಲ ದಾಖಲೆಗಳನ್ನು ಪಡೆದುಕೊಂಡು, ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ.

    ವಿಪರ್ಯಾಸವೆಂದರೆ, ಭಾರತೀಯ ಮೂಲದ ವ್ಯಕ್ತಿಗಳ ಹೆಸರಿನಲ್ಲಿಯೇ ವಂಚಕ ಕೀಪ್‌ಶೇರ್ ಆ್ಯಪ್‌ಗಳನ್ನು ಸಿದ್ದಪಡಿಸುತ್ತಿದ್ದರು. ಅದನ್ನು ವಾಟ್ಸ್‌ಆ್ಯಪ್, ಟೆಲಿಗ್ರಾಂ ಮೂಲಕ ಪಾರ್ಟ್‌ಟೈಂ ಉದ್ಯಮದ ಜಾಹೀರಾತು ನೀಡುತ್ತಿದ್ದರು. ಮತ್ತೊಂದೆಡೆ ಈ ಆ್ಯಪ್‌ನಲ್ಲಿ ಹೂಡಿಕೆ ಆ್ಯಪ್‌ಗಳ ಜತೆ ಲಿಂಕ್ ಮಾಡಲಾಗಿತ್ತು. ಈ ಆ್ಯಪ್ ಡೌನ್‌ಲೋಡ್ ಮಾಡಿ ಮಾಹಿತಿ ನೋಂದಾಯಿಸುತ್ತಿದ್ದ ಯುವಕರಿಂದ ಇಂತಿಷ್ಟು ಹಣ ಪಡೆಯಲಾಗುತ್ತಿತ್ತು. ಜತೆಗೆ ಸಾರ್ವಜನಿಕರಿಂದಲೂ ಹೂಡಿಕೆ ನೆಪದಲ್ಲಿ ಹಣ ಸಂಗ್ರಹಿಸುತ್ತಿದ್ದರು.

    ಟಾಸ್ಕ್ ನೀಡುತ್ತಿದ್ದರು: ಇನ್ನು ನೋಂದಣಿಯಾದ ಯುವಕರಿಗೆ ಸೆಲೆಬ್ರಿಟಿಗಳ ವಿಡಿಯೋಗಳನ್ನು ಲೈಕ್ ಮಾಡಿ, ಸಾರ್ವಜನಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವಂತಹ ಟಾಸ್ಕ್ ನೀಡಲಾಗುತ್ತಿತ್ತು. ಈ ಕೆಲಸ ಮಾಡಿದ ಯುವಕರಿಗೆ ಪ್ರತಿ ವಿಡಿಯೋಗೆ 20 ರೂ. ಪಾವತಿಸುತ್ತಿದ್ದರು. ಅದು ಕೀಪ್‌ಶೇರ್ ವ್ಯಾಲೆಟ್‌ನಲ್ಲಿ ಜಮೆ ಆಗುತ್ತಿತ್ತು. ಅದಕ್ಕಾಗಿ ಇಂತಿಷ್ಟು ದಿನ ಟಾರ್ಗೆಟ್ ಇಟ್ಟುಕೊಂಡಿದ್ದ ವಂಚಕರು, ತಮ್ಮ ಆ್ಯಪ್‌ನ ವ್ಯಾಲೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿದ್ದಂತೆ ಪ್ಲೇಸ್ಟೋರ್‌ನಲ್ಲಿ ಆ್ಯಪ್ ತೆಗೆದು ಹಾಕಲಾಗುತ್ತಿತ್ತು. ಈ ಮೂಲಕ ಸಾರ್ವಜನಿಕರು ತಮ್ಮ ಹೂಡಿಕೆಯ ಮೊತ್ತ ಮತ್ತು ಯುವಕರಿಗೆ ಪಾವತಿಸಬೇಕಾದ ಸಂಭಾವನೆಯೊಂದಿಗೆ ಕೋಟ್ಯಂತರ ರೂ. ಹಣವನ್ನು ಬೆಂಗಳೂರಿನಲ್ಲಿ ತೆರೆಯಲಾಗಿದ್ದ ಕಂಪನಿಗಳ ಬ್ಯಾಂಕ್ ಖಾತೆಗಳಿಂದ ನೇರವಾಗಿ ಜಮೆ ಆಗುವಂತೆ ಮಾಡಿಕೊಂಡು, ಆ ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿಕೊಂಡು, ಚೀನಾ ಮೂಲದ ಕ್ರಿಪ್ಟೋ ಎಕ್ಸ್‌ಜೇಂಜ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಈ ಎಲ್ಲ ವಹಿವಾಟುಗಳನ್ನು ಚೀನಾ ಮೂಲದ ವ್ಯಕ್ತಿಗಳು ಪೋನ್ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳ ನಿಯಂತ್ರಿಸುತ್ತಿದ್ದರು ಎಂದು ಇಡಿ ತಿಳಿಸಿದೆ.

    ವಿದೇಶಿಯರ ನಿಯಂತ್ರಣ: ಮತ್ತೊಂದು ಸ್ಫೋಟಕ ವಿಚಾರವೆಂದರೆ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ 92 ಆರೋಪಿಗಳ ಪೈಕಿ ಆರು ಮಂದಿ ಚೀನಾ ಮತ್ತು ತೈವಾನ್ ದೇಶದ ನಾಗರಿಕರಾಗಿದ್ದು, ಎಲ್ಲ ಅವ್ಯವಹಾರವನ್ನು ಅವರೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರು ಎಂದು ಇಡಿ ಮಾಹಿತಿ ನೀಡಿದೆ.

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts