More

    ಔಷಧ ಖರೀದಿಸುವ ಆಮಿಷ ಒಡ್ಡಿ 3 ಲಕ್ಷ ರೂ. ವಂಚನೆ

    ಹುಬ್ಬಳ್ಳಿ: ವಿದೇಶಿ ಮೂಲದ ಕಂಪನಿಯೊಂದರ ವತಿಯಿಂದ ಔಷಧ ಖರೀದಿಸುವ ಆಮಿಷವೊಡ್ಡಿ ನವನಗರದ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಹು&ಧಾ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
    ಇಲ್ಲಿನ ಹೊಸ್ಪಿಟೇಕ್​ ಸೊಲ್ಯುಶನ್ಸ್​ ಕಂಪನಿ ಮಾಲೀಕ ಮಹಾಂತಯ್ಯ ಶೀಗಿಹಳ್ಳಿಮಠ ಅವರನ್ನು, ಪೊಲಾರೀಸ್​ ಮೆಡ್​ ವರ್ಲ್ಡ್​ ಕೆನಡಾ ಕಂಪನಿಯ ಸೂಜನ್​ ಗ್ರಹಾಮನ್​ ಎಂಬ ಅಪರಿಚಿತ ವ್ಯಕ್ತಿ ವಾಟ್ಸ್​ ಆ್ಯಪ್​ ಹಾಗೂ ಇ-ಮೇಲ್​ ಮೂಲಕ ಜುಲೈನಲ್ಲಿ ಸಂಪಕಿರ್ಸಿದ್ದ. ನಮ್ಮ ಕಂಪನಿಗೆ 500 ಲೀ. “ನ್ಯೂಟ್ರಿಸಾಲ್​ ರಾ ಎಕ್ಸಟ್ರಾಕ್ಟ್​’ ಎಂಬ ಔಷಧದ ಅಗತ್ಯವಿದೆ. ಈ ಔಷಧ ಪುಣೆಯ ಮೆ.ಡಿ.ಕೆ.ಎಂಟರ್​ಪೆಜ್​ನಲ್ಲಿ ಮಾತ್ರ ಸಿಗುತ್ತದೆ. ಇದು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದೆ. ಅವರನ್ನು ನೀವು ಸಂಪಕಿರ್ಸಿ, ನಮಗೆ ಪೂರೈಸಿ ಎಂದು ತಿಳಿಸಿದ್ದರು.
    ಇದನ್ನು ನಂಬಿದ ಮಹಾಂತಯ್ಯ 2 ಲೀ.ಸ್ಯಾಂಪಲ್​ ಪಡೆಯುವ ಸಲುವಾಗಿ ಆರ್ಡರ್​ ನೀಡಿ, ಮುಂಗಡವಾಗಿ 3,00,000 ರೂ. ಹಣ ವರ್ಗಾಯಿಸಿದ್ದರು. ಆದರೆ, ಅವರು ಔಷಧವನ್ನೂ ಕೊಡದೇ, ಹಣವನ್ನೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts