More

    ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!

    ಬೆಂಗಳೂರು: ಎರಡು ಕೋಟಿ ರೂ. ಬಹುಮಾನದ ಆಸೆ ತೋರಿಸಿದ ಸೈಬರ್ ಕಳ್ಳರು ವ್ಯಕ್ತಿಗೆ 20 ಸಾವಿರ ರೂ. ವಂಚಿಸಿದ್ದಾರೆ. ಗೊಲ್ಲರಹಟ್ಟಿ ಸಮೀಪ ಅಂಜನಾನಗರದ ಎಂ. ಕುಮಾರ್ ವಂಚನೆಗೊಳಗಾದವರು.

    ಕೆಲ ದಿನಗಳ ಹಿಂದೆ ವಂಚಕರು ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕುಮಾರ್​ಗೆ ಕರೆ ಮಾಡಿ ನಿಮಗೆ ಲಾಟರಿಯಲ್ಲಿ 2 ಕೋಟಿ ರೂ. ಬಹುಮಾನ ಬಂದಿದೆ. ನೀವು ಹಣ ಪಡೆಯಲು ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ ಎಂದಿದ್ದಾರೆ.

    ಇದನ್ನೂ ಓದಿ: ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ

    ಅಂತೆಯೇ ಅವರು ಸೂಚಿಸಿದ ಅತುಲ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗೆ ಹಂತಹಂತವಾಗಿ 20,500 ರೂ.ಗಳನ್ನು ಕುಮಾರ್ ಜಮೆ ಮಾಡಿದ್ದಾರೆ. ಆದರೆ ಈ ಹಣ ಸಂದಾಯವಾದ ಬಳಿಕ ವಂಚಕರು ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್​ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್​

    ಈ ಬಗ್ಗೆ ಕುಮಾರ್ ದೂರು ನೀಡಿದ್ದು ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    29ರಿಂದ ಹಜ್ ಯಾತ್ರೆ ಶುರು- 1,000 ಯಾತ್ರಿಗಳಿಗಷ್ಟೇ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts