More

    ಸಂಘದ ಹಿತ ಕಾಪಾಡಲು ಗ್ರಾಹಕರ ಸಹಕಾರ ಮುಖ್ಯ

    ಉಪ್ಪಿನಬೆಟಗೇರಿ: ನಮ್ಮ ಬ್ಯಾಂಕ್ ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪ್ಪೂರಿ ಹೇಳಿದರು.
    ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೆಸಿಸಿ ಬ್ಯಾಂಕ್ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಹಾಗೂ ಕಿಸಾನ್ ಬಳಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
    ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾತನಾಡಿ, ಮುಂಗಾರು ಹಾಗೂ ಹಿಂಗಾರು ಬೆಳೆಯ ನಷ್ಟದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಹೆಚ್ಚುವರಿ ಸಾಲ ವಿತರಿಸಬೇಕೆಂದು ಕೇಳುತ್ತಿದ್ದಾರೆ. ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಆದ್ದರಿಂದ ಸಹಕಾರ ಸಂಘಕ್ಕೆ ಹೆಚ್ಚುವರಿ ಸಾಲ ಪೂರೈಸಬೇಕು ಎಂದು ಮನವಿ ಮಾಡಿದರು.
    ಕೆಸಿಸಿ ಬ್ಯಾಂಕ್ ಸ್ಥಳೀಯ ವ್ಯವಸ್ಥಾಪಕ ಎಸ್.ಕೆ. ಪಾಟೀಲ ಹೊಸಬೆಳಕು ಯೋಜನೆಯಡಿ ಹೊಸ ಉಳಿತಾಯ ಖಾತೆಯ ಪಾಸ್​ಬುಕ ನೀಡುವುದು, ಪಿಎಸಿಎಸ್​ಗಳಿಂದ ಸಂಗ್ರಹಿಸಲಾದ ಷೇರುಗಳಿಗೆ ಸ್ವೀಕೃತಿ ಪತ್ರ ನೀಡುವುದು, ಸ್ವಸಹಾಯ ಗುಂಪುಗಳ ಸಾಲ ವಿತರಣೆ, ಕೃಷಿಯೇತರ ಸಾಲ ವಿತರಣೆ, ಎಂ.ಟಿ. ಸಾಲ ವಿತರಣೆ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು.
    ಪಿಕೆಪಿಎಸ್ ಸಂಘದ ಉಪಾಧ್ಯಕ್ಷ ವೀರಣ್ಣ ಪರಾಂಡೆ ಮಾತನಾಡಿದರು.
    ಕೆಸಿಸಿ ಬ್ಯಾಂಕ್ ಹಿರಿಯ ನಿರೀಕ್ಷಕ ಸಿ.ಎಂ. ಬಾವಿಕಟ್ಟಿ, ಕಿರಿಯ ನಿರೀಕ್ಷಕ ಅಮೀತ ಕುಲಕರ್ಣಿ, ಪಿಕೆಪಿಎಸ್ ನಿರ್ದೇಶಕರಾದ ಚಂದ್ರನಾಥ ಅಷ್ಟಗಿ, ಧರೆಪ್ಪ ಬೊಬ್ಬಿ, ಕಾರ್ಯದರ್ಶಿ ಕಲ್ಲಪ್ಪ ಕಿತ್ತೂರ, ಮಂಜುನಾಥ ಬೆಳವಡಿ, ಕಾಶಿನಾಥ ದೊಡವಾಡ, ಮಹಮ್ಮದಸಲಿಂ ಖತೀಬ, ಸಂತೋಷ ಯಲಿಗಾರ, ರತ್ನಾ ವಿಜಾಪೂರ, ಅರುಣ ದಿವಟಗಿ, ಪ್ರದೀಪ ನಿಗದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts