More

    ಕನ್ನಡ ಶಾಲೆಗಳಿಂದ ನಾಡು, ನುಡಿ, ಸಂಸ್ಕೃತಿ ಉಳಿವು

    ಕಿಕ್ಕೇರಿ: ಸರ್ಕಾರಿ ಶಾಲೆ ಉಳಿದರೆ ಮಾತ್ರ ದೀನ, ದುರ್ಬಲರು ಬದುಕಲು ಸಾಧ್ಯ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

    ಸಮೀಪದ ಮಾಕವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನಾ, ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಹಳ್ಳಿಗಾಡಿನ ಪ್ರದೇಶದಲ್ಲಿ ಸರ್ಕಾರಿ ಶಾಲೆ, ಕನ್ನಡ ಶಾಲೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಯಿಂದ ಆಯ್ಕೆಯಾಗಿ ಬಂದ ಉತ್ತಮ ಶಿಕ್ಷಕರಿದ್ದಾರೆ. ಈಗಿರುವಾಗ ಏಕೆ ಖಾಸಗಿ ಶಾಲೆ ವ್ಯಾಮೋಹ?. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ದಿನದ ಒಂದೆರಡು ಗಂಟೆ ಮಕ್ಕಳೊಂದಿಗೆ ಬೆರೆಯಿರಿ. ಶಿಕ್ಷಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡರೆ ಮಕ್ಕಳು ಉತ್ತಮ ಸತ್ಪ್ರಜೆಯಾಗಿ ಹೊರಹೊಮ್ಮಲಿದ್ದಾರೆ ಎಂದರು.

    ಪ್ರತಿಷ್ಠೆಗಾಗಿ ಕಾನ್ವೆಂಟ್ ಎನ್ನುವ ವ್ಯಾಮೋಹ ಬಿಡಬೇಕು. ಮಾತೃಭಾಷೆ ಶಿಕ್ಷಣವನ್ನು ಬಲುಬೇಗ ಮಕ್ಕಳು ಅರ್ಥೈಸಿಕೊಳ್ಳಲಿದ್ದಾರೆ. ಹೆಚ್ಚು ಅಂಕ, ಜ್ಞಾನ ಸಂಪಾದನೆಗೆ ಸಹಕಾರಿ. ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ವಿಶೇಷ ಮೀಸಲಾತಿ ಇದೆ. ಕನ್ನಡ ಶಾಲೆ ಉಳಿದರೆ ಕನ್ನಡ ನಾಡು, ನುಡಿ, ಸಂಸ್ಕೃತಿ ಎಲ್ಲವೂ ಉಳಿಯಲಿದೆ. ಸಣ್ಣ ಹಳ್ಳಿಯಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ರೂಪಿಸಿರುವುದು ಗ್ರಾಮದ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿದರು.

    ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಮೋಹನ್, ಮುಖಂಡರಾದ ರೇವಣ್ಣ, ದೇವರಾಜು, ಮೂರ್ತಿ, ಪಾಲಾಕ್ಷ, ಕೃಷ್ಣೇಗೌಡ, ವಿಜಯಕುಮಾರ್, ಪ್ರಕಾಶ್, ಶ್ರೀನಿವಾಸ, ಚಲುವಯ್ಯ ಸೋಮಶೇಖರ್, ಶಿವಕುಮಾರ್, ಚೈತ್ರಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts