More

    ಜಾತಿ, ಧರ್ಮ ಮೀರಿದ ಸಂಸ್ಕೃತಿ ಜಾನಪದ

    ಕಳಸ: ಜಾತಿ, ಧರ್ಮ ಮೀರಿದ ಸಂಸ್ಕೃತಿ ಜಾನಪದ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಹೇಳಿದರು.

    ಜಾನಪದ ಪರಿಷತ್ ಕಳಸ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಸಂಸ್ಕೃತಿಯಾದ ಜಾನಪದ ಜನರನ್ನು ಒಗ್ಗೂಡಿಸುತ್ತದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಜಾನಪದ ಸಂಸ್ಕೃತಿಯನ್ನು ದೂರ ಮಾಡುತ್ತಿದ್ದೇವೆ. ಜಾನಪದ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಾಗ ಜಾನಪದ ಕಲೆ ಉಳಿಯುತ್ತದೆ. ಜಾನಪದ ಕಾರ್ಯಕ್ರಮ ವೇದಿಕೆ ಕಾರ್ಯಕ್ರಮವಾಗದೆ ಕಲಾವಿದರ ಮನೆಯಂಗಳಗಳಲ್ಲಿ ಕಾರ್ಯಕ್ರಮ ಮಾಡುವ ಮುಖಾಂತರ ಮನೆ ಮನೆಗೆ ಜಾನಪದ ಕೊಂಡೊಯ್ಯಬೇಕು ಎಂದು ಹೇಳಿದರು.
    ರಂಗಭೂಮಿ ಕಲಾವಿದ ರಾಜಗೋಪಾಲ ಜೋಷಿ ಮಾತನಾಡಿ, ಜಾನಪದ ಸಂಸ್ಕಾರಗಳ ನೆಲೆ. ಜ್ಞಾನದ ಸಂಕೇತ. ಜಾನಪದವನ್ನು ಆಳವಾಗಿ ಅಧ್ಯಯನ ಮಾಡಿ ಅನುಷ್ಠಾನಕ್ಕೆ ತಂದರೆ ಜೀವನ ಸುಲಲಿತವಾಗಲಿದೆ ಎಂದು ಹೇಳಿದರು.
    ತಾಲೂಕು ಕಜಾಪ ಅಧ್ಯಕ್ಷರಾಗಿ ಅಜಿತ್ ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಸಾಹಿತಿ ವೈ.ಪ್ರೇಮ್‌ಕುಮಾರ್ ಅವರ ಮೂಡಲ ಮೌನ ಪುಸ್ತಕ ಬಿಡುಗಡೆ ಮಾಡಲಾಯಿತು.
    ಜಿಲ್ಲಾ ಕಜಾಪ ಅಧ್ಯಕ್ಷ ಓಣಿತೋಟ ರತ್ನಾಕರ್, ಜಿಲ್ಲಾ ಉಪಾಧ್ಯಕ್ಷೆ ಸುಜಯಾ ಸದಾನಂದ, ಕಳಸ ಉಪ ತಹಸೀಲ್ದಾರ್ ಸುಧಾ, ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್, ಪಾಂಡುರಂಗ, ಕಳಸ ಕಜಾಪ ಉಪಾಧ್ಯಕ್ಷ ಕೆ.ಕೆ.ವಿನಾಯಕ, ಪ್ರಧಾನ ಕಾರ್ಯದರ್ಶಿ ಭರತರಾಜ್, ಖಜಾಂಜಿ ಅಂಕಿತ ಅರೋಷ್, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಎಸ್.ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts