More

    ಕವಿ,ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

    ಯಾದಗಿರಿ: ಕವಿಗಳು, ಬರಹಗಾರರು, ಸಾಹಿತಿಗಳು ಜತೆಗೆ ಕಲಾವಿದರಿಗೆ ಪ್ರೋತ್ಸಾಹ ಮತ್ತು ಸಮರ್ಪಕ ವೇದಿಕೆಗಳು ಅಗತ್ಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

    ನಗರದ ಜಿಲ್ಲಾ ಕಸಾಪ ಭವನದಲ್ಲಿ ಶುಕ್ರವಾರ ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ 5 ಪುಸ್ತಕಗಳ ಬಿಡುಗಡೆ, ವಿಶಿಷ್ಟ ಕಲಾಕೃತಿಗಳ ಪ್ರದರ್ಶನ ಹಾಗೂ ಸಗರನಾಡು ಪುಸ್ತಕಾಲಯಕ್ಕೆ ಚಾಲನೆ ನೀಡಿ ಮಾತನಾಡಿ, ಸಾಹಿತಿ, ಬರಹಗಾರರು ವರ್ತಮಾನದ ಧ್ವ್ವನಿಯಾಗುವ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲೆ ಬಹುದೊಡ್ಡ ಜವಬ್ದಾರಿ ಮತ್ತು ನಿರಿಕ್ಷೆಗಳಿವೆ. ಕಲಾವಿದರೂ ಸಹ ತಮ್ಮ ಕಲೆಯಲ್ಲಿಯೇ ಆತ್ಮತೃಪ್ತಿ ಕಾಣುತ್ತಾರೆ ಎಂದರು.

    ಇಂದಿನ ಇಂಟರ್ನೆಟ್ ಮತ್ತು ಮೊಬೈಲ್ ಯುಗದಲ್ಲಿ ಯುವಕರು ಪುಸ್ತಕಗಳನ್ನು ಓದಲು ಹಿಂದೇಟು ಹಾಕುತ್ತಾರೆ. ನಮಗೆ ಸಮಗ್ರ ಜ್ಞಾನ ಸಿಗಬೇಕಾದರೆ ಅದು ಖ್ಯಾತನಾಮರು ರಚಿಸಿದ ಕೃತಿಗಳಿಂದ ಮಾತ್ರ. ಕಥೆ, ಕಾದಂಬರಿಗಳನ್ನು ಓದುವುದರಿಂದ ನಮ್ಮ ಶಬ್ಧ ಭಂಡಾರದ ವ್ಯಾಪ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

    ಇದೇ ವೇಳೆ ಯಾದಗಿರಿ ಜಿಲ್ಲೆಯ ತತ್ವಪದಕಾರರು, ಯಾದಗಿರಿ-ಕಲಬುರಗಿ ಜಿಲ್ಲೆಯ ವಿಮೋಚನೆ ಹೋರಾಟಗಾರರು, ಹೈದರಾಬಾದ್ ವಿಮೋಚನಾ ಚಳುವಳಿ, ಮಾಸದ ಹೂ ಹೈಕು, ನಿಜರೂಪ ಕವನ ಸಂಕಲನವನ್ನು ಸಚಿವರು ಬಿಡುಗಡೆಗೊಳಿಸಿದರು. ಅರಳಿ ಮರದ ಎಲೆಗಳ ಮೇಲೆ ವಿಶಿಷ್ಟವಾದ ಚಿತ್ರಗಳನ್ನು ಬಿಡಿಸಿದ ಡಾ.ಮಲ್ಲಿಕಾಜರ್ುನ ಕಮತಗಿ ಚಿತ್ರ ಪ್ರದರ್ಶನಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಪ್ರದರ್ಶನಕ್ಕೆ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts