More

    ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನಸ್ನೇಹಿ ವಾತಾವರಣ

    ಶಿವಮೊಗ್ಗ: ಬಡಾವಣೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗಳಿಂದ ಜನಸ್ನೇಹಿ ವಾತಾವರಣ ನಿರ್ಮಾಣ ಆಗುವ ಜತೆಗೆ ಮಕ್ಕಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಸವಳಂಗ ರಸ್ತೆಯ ಕುವೆಂಪು ನಗರದಲ್ಲಿ ಸೋಮವಾರ ಬದುಕು ಕ್ಷೇಮಾಭಿವೃದ್ಧಿ ಸಂಘ ಹಾಗೂ ಜೆಎನ್‌ಎನ್ ಕಾಲೇಜು ಎದುರು ಭಾಗದ ಬಡಾವಣೆಗಳ ನಿವಾಸಿಗಳಿಂದ ಬದುಕು ಹಬ್ಬ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಯಾ ಬಡಾವಣೆಗಳ ನಿವಾಸಿಗಳು ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ಒಬ್ಬರಿಗೊಬ್ಬರ ಪರಿಚಯವಾಗುತ್ತದೆ. ಜತೆಗೆ ಜನಪ್ರತಿನಿಧಿಗಳ ಆಹ್ವಾನಿಸಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಸಲಹೆ ನೀಡಿದರು.
    ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದಕ್ಕೂ ಮುನ್ನ ಶಾಸಕ ಈಶ್ವರಪ್ಪ ಅವರು ಎನ್‌ಇಎಸ್ ಬಡಾವಣೆಯ 40 ಅಡಿ ಮುಖ್ಯ ರಸ್ತೆಯ ಬಾಕ್ಸ್ ಚರಂಡಿ, ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
    ಬದುಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಮುಖಂಡರಾದ ಸುಧೀಂದ್ರ, ಸಂಘದ ಗೌರವಾಧ್ಯಕ್ಷ ರಮೇಶ್ ಬಾಬು, ಕಾರ್ಯದರ್ಶಿ ಡಾ. ರಾಜ್ಪ್ರಕಾಶ್, ಉಪಾಧ್ಯಕ್ಷ ವೇದಾನಂದ್, ಖಜಾಂಚಿ ನಿಖಿಲ್ ಚವ್ಹಾಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts