More

    ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿದ್ದು, ಪರಮೇಶ್ವರ್​ ಶಾಪ ತಟ್ಟದೆ ಬಿಡಲ್ಲ: ಸಿ.ಟಿ. ರವಿ ಹೇಳಿಕೆ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಅವರ ಜೊತೆ ಕೃಷ್ಣ ಇಲ್ಲ‌. ಕೃಷ್ಣ ಇರೋದು ಬಿಜೆಪಿ ಪಾಳಯದಲ್ಲಿ. ಡಿಕೆಶಿ ಅವರು ತಮ್ಮ ಶಕ್ತಿಯನ್ನು ಬಳಸಿ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

    ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಿ.ಟಿ. ರವಿ, ಮಲ್ಲಿಕಾರ್ಜುನ ಖರ್ಗೆ ಅವರು ಮೊದಲಿನಿಂದಲೂ ಸಿದ್ದರಾಮಯ್ಯ ಜೊತೆಯಲ್ಲಿ ಇಲ್ಲ. ಪರಮೇಶ್ವರ್​ ಅವರ ಶಾಪ ಸಿದ್ದರಾಮಯ್ಯಗೆ ತಟ್ಟದೆ ಬಿಡಲ್ಲ ಎಂದರು.

    ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ; ಗುಂಡ್ಲುಪೇಟೆಯಲ್ಲಿ ಭರ್ಜರಿ ರೋಡ್ ಶೋ | ಮತಬೇಟೆಯಲ್ಲಿ ಅಮಿತ್ ಷಾ

    ನನಗೂ ಸಿಎಂ ಆಗುವ ಆಸೆ ಇದೆ

    ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಮಾತನಾಡಿ ಇದು ರಾಜಕೀಯ ವ್ಯಭಿಚಾರನಾ? ಚಿಕ್ಕಮಗಳೂರಿಗೆ ಮಾತ್ರ ಈ ವ್ಯಭಿಚಾರ ಸಿಮೀತವಾ? ಎಂದು ಪ್ರಶ್ನಿಸಿ, ಇದನ್ನು ಎಚ್​.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದರು. ಕ್ಷೇತ್ರದಲ್ಲಿ ಮಾತ್ರ ಮುಂದಿನ ಸಿಎಂ ಅಂತಾ ಕೂಗುತ್ತಾರೆ. ಅದಕ್ಕೆ ನಾನು ಈಗ ಕ್ಲೈಂ ಮಾಡಲ್ಲ. ಇಡೀ ರಾಜ್ಯದಲ್ಲಿ ಯಾವತ್ತೂ ಮುಂದಿ‌ನ ಸಿಎಂ ಸಿಟಿ ರವಿ ಅಂತ ಕೂಗುತ್ತಾರೋ ಆಗ ನಾನದನ್ನು ಕ್ಲೈಂ ಮಾಡಬಹುದು. ನನಗೂ ಸಿಎಂ ಆಗುವ ಆಸೆ ಇದೆ ಎಂದರು.

    ಸೋಮಣ್ಣ ಕೂಡ ರಾಜ್ಯ ನಾಯಕರು

    ಸೋಮಣ್ಣ ಹೊರಭಾಗದವರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸೋಮಣ್ಣ ರಾಜ್ಯದ ನಾಯಕರು. ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ರೀತಿ ಸೋಮಣ್ಣ ಕೂಡ ರಾಜ್ಯ ನಾಯಕರು. ಬಾದಾಮಿ, ಕೋಲಾರಕ್ಕೆ ಅನ್ವಯ ಆಗದ ವಿಚಾರ ಇಲ್ಲೇಕೆ ಅನ್ವಯ ಎಂದು ಪ್ರಶ್ನೆ ಮಾಡಿದರು.

    ಅಸಹನೆ ಹೊರಬಂದಿದೆ

    ಲಿಂಗಾಯಿತ ಸಿಎಂ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಲಿಂಗಾಯತರ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಲಿಂಗಾಯತರೆಲ್ಲ ವರುಣಾದಲ್ಲಿ ಒಗ್ಗಟ್ಟಾಗಿದ್ದಾರೆ. ಇಲ್ಲಿ ಅಹಿಂದ ವರ್ಕೌಟ್ ಆಗ್ತಿಲ್ಲ. ಜೈ ಹಿಂದ್ ವರ್ಕೌಟ್ ಆಗಿದೆ ಅನ್ನೋದು ಗೊತ್ತಾಗಿದೆ. ಅವರ ಬಾಯಿಯಿಂದ ಅಸಹನೆ ಹೊರಬಂದಿದೆ. ಇದಕ್ಕೆ ಇಡೀ ಕಾಂಗ್ರೆಸ್​ ಬೆಲೆ ತೆರಬೇಕಾಗುತ್ತೆ. ಸಿದ್ದರಾಮಯ್ಯಗೆ ಎರಡು ರೀತಿ ಸಿಟ್ಟಿರಬೇಕು. ಒಂದು ಕೋಲಾರದಲ್ಲಿ ಅವಕಾಶ ಸಿಗಲಿಲ್ಲ ಎಂಬುದು ಮತ್ತು ವರುಣದಲ್ಲಿ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡ ಕಾರಣ ಇರಬಹುದು. ಹೀಗಾಗಿ ಅಸಹನೆ ಮಾತು ಬಂದಿರಬಹುದು ಎಂದು ಹೇಳಿದರು.

    ಇದನ್ನೂ ಓದಿ: ಭಿನ್ನಮತ ಮರೆತು ಕೆಲಸ ಮಾಡಿ; ವಿಜಯಪುರ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ

    ಡ್ಯಾಂ ಗಟ್ಟಿ‌ ಮಾಡಿದ್ದೇವೆ

    ಲಿಂಗಾಯತ ಡ್ಯಾಂ ಒಡೆದಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್‌ಗೆ ರಾಜಕೀಯ ವೃತ್ತಿ. ಅವರದ್ದು ಬರೀ ಒಡೆಯುವ ಕೆಲಸ. ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಒಡೆದು ಅದನ್ನು ಅನುಭವಿಸಿದ್ರಿ. ನಾವು ಲಿಂಗಾಯತರ ಡ್ಯಾಂನ್ನು ಗಟ್ಟಿ ಮಾಡಿದ್ದೇವೆ. ಬೇರೆ ಬೇರೆ ಸಮುದಾಯದವನ್ನು ಸೇರಿಸಿಕೊಂಡು ಡ್ಯಾಂ ಗಟ್ಟಿ‌ ಮಾಡಿದ್ದೇವೆ. ಹಿಂದುತ್ವದ ಡ್ಯಾಂನ್ನು ಗಟ್ಟಿ ಮಾಡಿ ಎತ್ತರಿಸಿದ್ದೇವೆ. ಚುನಾವಣೆಯಲ್ಲಿ ಮುಳುಗಿದಾಗ ನಿಮಗೆ ಗೊತ್ತಾಗುತ್ತದೆ. ಕಾಂಗ್ರೆಸ್ ಮುಳುಗುವುದು ನಿಶ್ಚಿತ ಎಂದರು. (ದಿಗ್ವಿಜಯ ನ್ಯೂಸ್​)

    ಸಾಮೂಹಿಕ ವಿವಾಹ; ಯುವತಿಯರಿಗೆ ಕನ್ಯತ್ವ ಪರೀಕ್ಷೆ …ಮುಂದೆನಾಯ್ತು..?

    “ಮೂರು ಮಕ್ಕಳನ್ನು ಹೊಂದಿರುವ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸಿ” ಎಂದ ಶಾಸಕ!

    ಸ್ಟಾರ್​ ನಟಿ ಪಟ್ಟ ಕಳೆದುಕೊಂಡ ಬಳಿಕ ಬದಲಾದ ಸಮಂತಾ: ತೆಲುಗು ನಿರ್ಮಾಪಕನ ಸ್ಪೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts