More

    ಸಾಮೂಹಿಕ ವಿವಾಹ; ಯುವತಿಯರಿಗೆ ಕನ್ಯತ್ವ ಪರೀಕ್ಷೆ …ಮುಂದೆನಾಯ್ತು..?

    ಮಧ್ಯಪ್ರದೇಶ: ಮದುವೆ ಎಂದರೆ ಸಡಗರ ಮತ್ತು ಸಂಭ್ರಮ. ನವ ಜೋಡಿ ಹೊಸ ಜೀವನವನ್ನು ಕಟ್ಟಿಕೊಳ್ಳುವ ಕಾಲವಾಗಿದೆ. ಹೀಗಿರುವಾಗ ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇಳೆ ಅವಾಂತರವಾಗಿದೆ. ವಧುಗಳಿಗೆ ಅಧಿಕಾರಿಗಳು ಕನ್ಯತ್ವ ಪರೀಕ್ಷೆ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆಯಡಿ ಮಧ್ಯಪ್ರದೇಶದ ಗಡ್ಸರೈ ಪ್ರದೇಶದ ದಿಂಡೊರಿ ಎಂಬಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವಿವಾಹ ಸಮಾರಂಭದಲ್ಲಿ ಅಧಿಕಾರಿಗಳು ನವ ವಧುಗಳಿಗೆ ಕನ್ಯತ್ವ ತಪಾಸಣೆ ನಡೆಸಿದ್ದಾರೆ. ಶನಿವಾರ ಈ ಘಟನೆ ನಡೆದಿದ್ದು, 29 ಯುವತಿಯರಲ್ಲಿ ಐವರು ವಿವಾಹದಿಂದ ದೂರ ಉಳಿದಿದ್ದಾರೆ.

    ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ. ಯಾರು ಈ ತಪಾಸಣೆಗೆ ಆದೇಶ ನೀಡಿದರು. ಇದು ರಾಜ್ಯದ ಬಡ ಹೆಣ್ಣು ಮಕ್ಕಳಿಗೆ ಸರ್ಕಾರ ಮಾಡಿದ ಅವಮಾನ ಎಂದು ಕಾಂಗ್ರೆಸ್​​ ಆರೋಪಿಸಿದೆ.

    ಇದನ್ನೂ ಓದಿ: “ಮೂರು ಮಕ್ಕಳನ್ನು ಹೊಂದಿರುವ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸಿ” ಎಂದ ಶಾಸಕ! 
    ಗರ್ಭಧಾರಣೆ ಪರೀಕ್ಷೆಗೆ ಯಾವುದೇ ಆದೇಶವಿರಲಿಲ್ಲ. ಆದರೆ ಕೆಲವು ವಧುಗಳು ಸ್ತ್ರೀರೋಗ ಸಂಬಂಧಿತ ಕಾಯಿಲೆಗಳ ಬಗ್ಗೆ ಹೇಳಿಕೊಂಡಾಗ ಅಲ್ಲಿದ್ದ ವೈದ್ಯರು ಅವರಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ವೈದ್ಯಕೀಯ ತಪಾಸಣೆ ವೇಳೆ ಕೆಲವು ವಧುಗಳು ತಮಗೆ ಮುಟ್ಟಿನ (ಋತುಚಕ್ರ) ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಾದ ನಂತರ ಅಲ್ಲಿದ್ದ ವೈದ್ಯರು ಅವರಿಗೆ ಗರ್ಭಧಾರಣೆ ಪರೀಕ್ಷೆ ನಡೆಸಲು ಮುಂದಾದರು ಎಂದು ತಿಳಿದು ಬಂದಿದೆ.

    ನೌಕಾನೆಲೆ ಜಾಗದಲ್ಲಿ ಪ್ರಧಾನಿ ಮೋದಿ ಸಮಾವೇಶಕ್ಕೆ ಅನುಮತಿ ಕೊಟ್ಟರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ: ಬಿ.ಕೆ.ಹರಿಪ್ರಸಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts