More

    ಕಳೆದ ವರ್ಷದ ಫೈನಲಿಸ್ಟ್ ತಂಡಗಳ ನಡುವೆ ಈ ಸಲದ ಐಪಿಎಲ್ ಉದ್ಘಾಟನಾ ಪಂದ್ಯ?

    ನವದೆಹಲಿ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಹಾಲಿ ರನ್ನರ್‌ಅಪ್ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳ ನಡುವೆ ಮಾರ್ಚ್ 26ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದೊಂದಿಗೆ ಐಪಿಎಲ್ 15ನೇ ಆವೃತ್ತಿ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದರೆ, ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದ ಎದುರಾಳಿಗಳ ಮುಖಾಮುಖಿಯೊಂದಿಗೆ 15ನೇ ಆವೃತ್ತಿಗೆ ಚಾಲನೆ ದೊರೆಯಲಿದೆ.

    ಎರಡು ಹೊಸ ತಂಡಗಳ ಸೇರ್ಪಡೆ ಮತ್ತು ಹೊಸ ಸ್ವರೂಪದಿಂದಾಗಿ ಈ ಬಾರಿ ಲೀಗ್ ಪಂದ್ಯಗಳ ಸಂಖ್ಯೆ 70ಕ್ಕೇರಲಿದ್ದು, ಮುಂಬೈನಲ್ಲಿ 55 ಮತ್ತು ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ. ಮೇ 29ರಂದು ನಡೆಯಲಿರುವ ಫೈನಲ್ ಸಹಿತ ಪ್ಲೇಆಫ್​ ಪಂದ್ಯಗಳಿಗೆ ಅಹಮದಾಬಾದ್ ಆತಿಥ್ಯ ವಹಿಸುವ ನಿರೀಕ್ಷೆ ಇದೆ.

    ಮುಂದಿನ 24 ಗಂಟೆಗಳಲ್ಲಿ ಟೂರ್ನಿಯ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿ ಮುಗಿದ ಬೆನ್ನಲ್ಲೇ ಸೋಮವಾರವೇ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆರಂಭಿಕ ಪಂದ್ಯಗಳಿಗೆ ಶೇ. 25 ಪ್ರೇಕ್ಷಕರು: ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೆ ಶೇ. 25 ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಶೇಕಡಾವಾರು ಸಂಖ್ಯೆಯನ್ನು ಏರಿಸಲು ಚಿಂತಿಸಲಾಗಿದೆ.

    ತಂಡಗಳ ಪ್ರಯಾಣಕ್ಕೆ ಪ್ರತ್ಯೇಕ ಲೇನ್
    ಐಪಿಎಲ್ ತಂಡಗಳು ಮುಂಬೈನಲ್ಲಿ ಹೋಟೆಲ್‌ನಿಂದ ಸ್ಟೇಡಿಯಂಗೆ ಪ್ರಯಾಣಿಸುವ ವೇಳೆ ಟ್ರಾಫಿಕ್ ಸಮಸ್ಯೆ ಎದುರಾಗುವುದನ್ನು ತಡೆಗಟ್ಟುವ ಸಲುವಾಗಿ ಪ್ರತ್ಯೇಕ ವಿಶೇಷ ಲೇನ್ ವ್ಯವಸ್ಥೆ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ, ಬಿಸಿಸಿಐಗೆ ಭರವಸೆ ನೀಡಿದೆ. ಕರೊನಾ ಭೀತಿಯಿಂದಾಗಿ ತಂಡಗಳ ವಿಮಾನ ಪ್ರಯಾಣ ತಡೆಗಟ್ಟಲು ಈ ಬಾರಿ ಲೀಗ್ ಪಂದ್ಯಗಳನ್ನು ಮುಂಬೈ-ಪುಣೆಗೆ ಸೀಮಿತಗೊಳಿಸಲಾಗಿದೆ. ಹೀಗಾಗಿ ತಂಡಗಳು ಟೂರ್ನಿಯುದ್ದಕ್ಕೂ ರಸ್ತೆ ಮಾರ್ಗವಾಗಿ ಬಸ್‌ನಲ್ಲೇ ಪ್ರಯಾಣಿಸಲಿವೆ. ಈ ವೇಳೆ ತಂಡಗಳು ಟ್ರಾಫಿಕ್‌ನಲ್ಲಿ ಸಿಲುಕಿ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಕಾರಿಡಾರ್ ವ್ಯವಸ್ಥೆ ಮಾಡಲು ಮಹಾರಾಷ್ಟ್ರ ಸರ್ಕಾರ ಚಿಂತಿಸಿದೆ.

    ಐಪಿಎಲ್ ಟೂರ್ನಿಗೆ ಹೊಸ ಸ್ವರೂಪ; ಒಂದೇ ಗುಂಪಿನಲ್ಲಿ ಆರ್‌ಸಿಬಿ, ಸಿಎಸ್‌ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts