More

    ಮಿಂಚಿದ ಋತುರಾಜ್, ರಾಬಿನ್ ಉತ್ತಪ್ಪ; 9ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಿಎಸ್‌ಕೆ

    ದುಬೈ: ಕನ್ನಡಿಗ ರಾಬಿನ್ ಉತ್ತಪ್ಪ (63 ರನ್, 44ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಆರಂಭಿಕ ಋತುರಾಜ್ ಗಾಯಕ್ವಾಡ್ (70 ರನ್, 50 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿಯ ಪ್ರತಿಹೋರಾಟದ ಫಲವಾಗಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್ 14ನೇ ಆವೃತ್ತಿಯ ಫೈನಲ್‌ಗೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಮೊದಲ ಕ್ವಾಲಿಫೈಯರ್ ಹಣಾಹಣಿಯ ಕಡೇ ಓವರ್‌ನಲ್ಲಿ ಜಯಿಸಲು 13 ರನ್ ಅವಶ್ಯಕತೆಯಿದ್ದಾಗ ನಾಯಕ ಎಂಎಸ್ ಧೋನಿ (18*ರನ್, 6 ಎಸೆತ, 3 ಬೌಂಡರಿ, 3 ಬೌಂಡರಿ, 1 ಸಿಕ್ಸರ್) 3 ಬೌಂಡರಿ ಸಿಡಿಸಿ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ಸಿಎಸ್‌ಕೆ ತಂಡವನ್ನು 4 ವಿಕೆಟ್‌ಗಳಿಂದ ಗೆಲ್ಲಿಸಿದರು.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಪೃಥ್ವಿ ಷಾ (60 ರನ್, 34 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ರಿಷಭ್ ಪಂತ್ (51*ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 172 ರನ್‌ಗಳಿಸಿತು. ಪ್ರತಿಯಾಗಿ ಸಿಎಸ್‌ಕೆ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ಗಳಿಸಿ ಜಯದ ನಗೆ ಬೀರಿತು. ಡೆಲ್ಲಿ ತಂಡ ಸೋತರೂ ಫೈನಲ್‌ಗೇರಲು ಇನ್ನೊಂದು ಅವಕಾಶವಿದ್ದು, ಆರ್‌ಸಿಬಿ-ಕೆಕೆಆರ್ ನಡುವಿನ ವಿಜೇತರನ್ನು ಬುಧವಾರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ.

    ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್‌ಗೆ 172 (ಪೃಥ್ವಿ ಷಾ 60, ರಿಷಭ್ ಪಂತ್ 51*, ಶಿಮ್ರೋನ್ ಹೆಟ್ಮೆಯರ್ 37, ಜೋಸ್ ಹ್ಯಾಸಲ್‌ವುಡ್ 29ಕ್ಕೆ 2, ರವೀಂದ್ರ ಜಡೇಜಾ 23ಕ್ಕೆ 1, ಮೊಯಿನ್ ಅಲಿ 27ಕ್ಕೆ 1, ಡ್ವೇನ್ ಬ್ರಾವೊ 31ಕ್ಕೆ 1), ಸಿಎಸ್‌ಕೆ: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 173 (ಋತುರಾಜ್ ಗಾಯಕ್ವಾಡ್ 70, ರಾಬಿನ್ ಉತ್ತಪ್ಪ 63, ಎಂಎಸ್ ಧೋನಿ 18*, ಟಾಮ್ ಕರ‌್ರನ್ 29ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts