More

    ಸಾವಿರಾರು ಜನರ ಖಾತೆಗೆ ಬಂದು ಬಿತ್ತು ಭಾರಿ ಹಣ!; 75 ಸಾವಿರ ಖಾತೆಗಳಿಗೆ ಒಟ್ಟು 1,310 ಕೋಟಿ ರೂ. ಜಮೆ…

    ನವದೆಹಲಿ: ಸಾವಿರಾರು ಮಂದಿಯ ಖಾತೆಗೆ ಭಾರಿ ಮೊತ್ತದ ಹಣ ಬಂದು ಬಿಟ್ಟಿದೆ. ಹೆಚ್ಚೂಕಡಿಮೆ 75,000 ಖಾತೆಗಳಿಗೆ ಒಟ್ಟು ಸುಮಾರು 1,310 ಕೋಟಿ ರೂಪಾಯಿ ಹಣ ಸಂದಾಯವಾಗಿದೆ. ಅಂದಹಾಗೆ ಕ್ರಿಸ್​ಮಸ್​ ಸಂದರ್ಭದಲ್ಲಿ ಬ್ಯಾಂಕ್​ವೊಂದರಿಂದ ಭಾರಿ ಮೊತ್ತ ಸಾವಿರಾರು ಖಾತೆಗಳಿಗೆ ಜಮೆಯಾಗಿದೆ.

    ಲಂಡನ್​ನ ಸಂಟಂಡರ್​ ಬ್ಯಾಂಕ್​ 176 ಮಿಲಿಯನ್ ಡಾಲರ್ ಹಣವನ್ನು ಒಟ್ಟು 75 ಸಾವಿರ ಖಾತೆಗಳಿಗೆ ಜಮೆ ಮಾಡಿದೆ. ಹಾಗಂತ ಇದು ಖಾತೆದಾರರಿಗೆ ಹೋಗಬೇಕಾಗಿದ್ದ ಹಣವಲ್ಲ, ಇದು ಬ್ಯಾಂಕ್​ನ ತಾಂತ್ರಿಕ ತೊಂದರೆಯಿಂದಾದ ಎಡವಟ್ಟು.

    ಇದನ್ನೂ ಓದಿ: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್​ ಸಾಹಸಕ್ಕೆ ಭಾರಿ ಮೆಚ್ಚುಗೆ!

    ಬ್ಯಾಂಕ್​ನ 2 ಸಾವಿರ ಉದ್ಯಮ ಖಾತೆಗಳ ಹಣವನ್ನು ಆ ಸಂಸ್ಥೆಗಳ ಉದ್ಯೋಗಿಗಳಿಗೆ ಮತ್ತು ಸಂಬಂಧಿತ ವ್ಯಕ್ತಿಗಳಿಗೆ ಜಮೆ ಮಾಡುವಾಗ ತಾಂತ್ರಿಕ ಲೋಪದಿಂದ ಬಹಳಷ್ಟು ಮಂದಿಗೆ ಎರಡೆರಡು ಸಲ ಹಣ ಜಮೆ ಆಗಿದೆ. ಹೀಗಾಗಿ ಎಷ್ಟೋ ಮಂದಿ ಸಂಬಳ ಡಬಲ್ ಆಯ್ತಾ ಎಂದು ಭಾವಿಸಿದ್ದೂ ನಡೆದಿದೆ ಎನ್ನಲಾಗಿದೆ. ಇನ್ನು ಬೇರೆ ಖಾತೆಗಳಿಗೆ ಅವರಿಗೆ ಜಮೆ ಆಗಬೇಕಿದ್ದಕ್ಕಿಂತಲೂ ಹೆಚ್ಚಿನ ಮೊತ್ತ ರವಾನೆ ಆಗಿದೆ.

    ಇದನ್ನೂ ಓದಿ: ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರ ಕೊಲೆ!; ಇದು ಸಮಾಧಾನದ ಸಂಗತಿ, ಏಕೆಂದರೆ..

    ಷೆಡ್ಯೂಲಿಂಗ್ ಸಮಸ್ಯೆಯಿಂದ ಈ ಎಡವಟ್ಟಾಗಿದೆ ಎಂದು ಬ್ಯಾಂಕ್ ಒಪ್ಪಿಕೊಂಡಿದೆ. ಈ ಎಕ್ಸ್​ಟ್ರಾ ಹಣ ಪ್ರತಿಸ್ಪರ್ಧಿ ಬ್ಯಾಂಕ್​ಗಳಲ್ಲಿನ ಕೆಲವು ಖಾತೆಗಳಿಗೂ ಹೋಗಿದ್ದರಿಂದ ಆ ಹಣವನ್ನು ವಾಪಸ್ ಪಡೆಯಲು ಈಗ ಬ್ಯಾಂಕ್​ ಹೆಣಗಾಡುತ್ತಿದೆ. ಬ್ಯಾಂಕ್ ಎರರ್​ ರಿಕವರಿ ಪ್ರೊಸೆಸ್​ ಮೂಲಕ ಈ ಹಣವನ್ನು ವಾಪಸ್ ಪಡೆಯಬೇಕಾಗಿದ್ದು, ಪ್ರಕ್ರಿಯೆ ಆರಂಭಗೊಂಡಿದೆ ಎಂದು ಹೇಳಿದೆ. –ಏಜೆನ್ಸೀಸ್​

    ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts