More

    ಮೃತ ಇಂಜಿನಿಯರ್ ಕುಟುಂಬಕ್ಕೆ ಕೋಟಿ ರೂ. ಪರಿಹಾರ

    ವಾಡಿ: ಎಸಿಸಿ ಸಿಮೆಂಟ್ ಆಡಳಿತ ಮಂಡಳಿಯ ಮಾನಸಿಕೆ ಹಿಂಸೆಯಿAದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್ ರಮೇಶ ಪವಾರ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಲು ಕಂಪನಿ ಒಪ್ಪಿಕೊಂಡಿದೆ.

    ಕAಪನಿ ಅಧಿಕಾರಿಗಳ ಕಿರುಕುಳ ಬಗ್ಗೆ ವಿಡಿಯೋ ರೆಕಾರ್ಡ್ ಮತ್ತು ಡೆತ್ ನೋಟ್ ಬರೆದಿಟ್ಟು ಗುರುವಾರ ನಸುಕಿನ ಜಾವ ರಮೇಶ ಪವಾರ್ ಸಾವಿಗೆ ಶರಣಾಗಿದ್ದ. ಇಷ್ಟಾದರೂ ಕಾರ್ಖಾನೆ ಅಧಿಕಾರಿಗಳು ಮಿಡಿಯದೆ ತಮ್ಮ ಪಾಡಿಗೆ ಕೆಲಸ ಮುಂದುವರಿಸಿದ್ದರು. ಇದರಿಂದ ಸಿಡಿದೆದ್ದ ಕಾರ್ಮಿಕರು ಕಂಪನಿಗೆ ನುಗ್ಗಿ, ಎಲ್ಲರನ್ನು ಹೊರಗೆ ಕರೆತಂದು ಕೆಲಸ ಸ್ಥಗಿತಗೊಳಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದರು.

    ಗುರುವಾರ ಸಂಜೆ 7ಕ್ಕೆ ಕಂಪನಿ ಮುಖ್ಯಸ್ಥರು, ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಗೂ ಕುಟುಂಬದವರ ಮಧ್ಯೆ ಮಾತುಕತೆ ನಡೆಯಿತು. ಆರಂಭದಲ್ಲಿ ದೊಡ್ಡ ಮೊತ್ತದ ಪರಿಹಾರ ನೀಡಲು ಕಂಪನಿ ಒಪ್ಪಲಿಲ್ಲ. ಬಳಿಕ ಸ್ಥಳೀಯ ಮುಖಂಡರ ಒತ್ತಾಯಕ್ಕೆ ಮಣಿದು ತಿಂಗಳೊಳಗೆ ಒಂದು ಕೋಟಿ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿತು.

    ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ಮಹಿಮೂದ್ ಸಾಹೇಬ್, ಬಿಜೆಪಿ ಹಿಂದುಳಿದ ಮೋರ್ಚಾ ಜಿ¯್ಲÁ ಉಪಾಧ್ಯP್ಷÀ ಬಸವರಾಜ ಪಂಚಾಳ, ಮುಖಂಡರಾದ ಭಾಗವತ ಸುಳೆ, ಶಂಕರ ರಾಠೋಡ್, ರಾಜು ಮುಕ್ಕಣ್ಣ, ರಾಮಚಂದ್ರ ರಾಠೋಡ್, ರಿಚರ್ಡ್ ಮರೆಡ್ಡಿ, ವೀರಣ್ಣ ಯಾರಿ, ಅಶೋಕ ಸೂರ್ಯವಂಶಿ, ಬಶೀರ್ ಖುರೇಷಿ, ಶ್ರಾವಕುಮಾರ ಮೋಸಲಗಿ, ರಾಮಚಂದ್ರ ರೆಡ್ಡಿ ಇತರರಿದ್ದರು.

    14 ಗಂಟೆ ವಸತಿಗೃಹದಲ್ಲೇ ನೇತಾಡಿದ ಮೃತದೇಹ!: ಗುರುವಾರ ನಸುಕಿನ ಜಾವ ಎಸಿಸಿ ಕಾಲನಿ ವಸತಿ ಗೃಹದಲ್ಲಿ ಇಂಜಿನಿಯರ್ ರಮೇಶ ಪವಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ನೌಕರರು ಮತ್ತು ಕಾರ್ಮಿಕರು ಸ್ಥಳಕ್ಕೆ ಧಾವಿಸಿದರು. ಸೂಕ್ತ ಪರಿಹಾರ ನೀಡುವವರೆಗೂ ಮೃತದೇಹ ಮುಟ್ಟಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮನವೊಲಿಸಲು ಮುಂದಾದರೂ ಯಾರೊಬ್ಬರೂ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ಸುಮಾರು 14 ಗಂಟೆ ನೇಣು ಬಿಗಿದ ಸ್ಥಿತಿಯಲ್ಲೇ ಶವ ನೇತಾಡುತ್ತಿತ್ತು. ಕೊನೆಗೆ ಸಂಜೆ ಕಂಪನಿ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗಿ ಪರಿಹಾರಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಕೆಳಗಿಳಿಸಲಾಯಿತು. ಶುಕ್ರವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts