More

    ಹೊಸ ದಾಖಲೆ ಸೃಷ್ಟಿಸಿದ ಅನ್ನದಾತರು !

    ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ  | 1.83 ಕೋಟಿ ಪ್ಲಾಟ್ ಗಳಿಗೆ ಸ್ವಯಂ ಪ್ರಮಾಣಪತ್ರ

    ಯಾವುದಕ್ಕೆಲ್ಲ ಬಳಕೆ

    – ಬೆಳೆ ವಿಮೆ ಯೋಜನೆ ಇತ್ಯರ್ಥ

    – ಪ್ರಕೃತಿ ವಿಕೋಪದಿಂದಾದ ಬೆಳೆ ನಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ

    – ಬೆಳೆ ವಿಸ್ತೀರ್ಣ ಮರು ಹೊಂದಾಣಿಕೆ

    – ಬೆಳೆ ಉತ್ಪಾದನೆ ಲೆಕ್ಕ ಹಾಕಲು

    ಬೆಂಗಳೂರು: ರಾಜ್ಯದ ಅನ್ನದಾತರು ತಮ್ಮ ಬೆಳೆಗೆ ತಾವೇ ಪ್ರಮಾಣಪತ್ರ ನೀಡುವ ಪ್ರಾಯೋಗಿಕ ಯೋಜನೆಯಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ 1.83 ಕೋಟಿ ಪ್ಲಾಟ್ ಗಳ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ಅಪ್ ಲೋಡ್ ಮಾಡಿದ್ದಾರೆ. ನಿಗದಿತ 2.20 ಕೋಟಿ ಪ್ಲಾಟ್ ಗಳ ಬೆಳೆ ಸಮೀಕ್ಷೆ ಗುರಿಯಲ್ಲಿ ಶೇ.88ರಷ್ಟು ಸಾಧನೆಯಾಗಿದೆ.

    ಇದನ್ನೂ ಓದಿ: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

    ಬೆಳೆ ಸಮೀಕ್ಷೆ ಉತ್ಸವಕ್ಕೆ ಆ.15ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಿದ್ದರು. ಸೆ.23ಕ್ಕೆ ಪ್ರಾಯೋಗಿಕ ಯೋಜನೆ ಅವಧಿ ಪೂರ್ಣಗೊಂಡಿದೆ. ಪ್ರಾರಂಭಿಕ ಮಳೆ, ನೆಟ್ವರ್ಕ್ ಸಮಸ್ಯೆ ಮಧ್ಯೆಯೂ ಹಿಂದಿನ 2 ವರ್ಷಗಳ ಬೆಳೆ ಸಮೀಕ್ಷೆಯ ಇತಿಹಾಸವನ್ನು ರೈತರು ಬದಲಿಸಿದ್ದಾರೆ.

    ಇದನ್ನೂ ಓದಿ: ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ

    ರಾಜ್ಯದಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ 2017ರಿಂದ ಪ್ರಾರಂಭವಾಗಿದ್ದು, ಸರ್ಕಾರಿ ಅಧಿಕಾರಿಗಳು ನೆರವೇರಿಸಿದ್ದರು. 2019ರಲ್ಲಿ ಮುಂಗಾರು, ಹಿಂಗಾರು ಸೇರಿ 2.05 ಕೋಟಿ ಪ್ಲಾಟ್ ಗಳ ಬೆಳೆ ಸಮೀಕ್ಷೆಯಾಗಿತ್ತು. ಇದಕ್ಕಾಗಿ 4 ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಗಿತ್ತು.

    ಕಾಫಿ ಕೃಷಿ ಇಲ್ಲ ಖುಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts