More

    ಕಾಫಿ ಕೃಷಿ ಇಲ್ಲ ಖುಷಿ!

    * ಪೇಯ ಉದ್ದಿಮೆಗಿದೆ ಅನೇಕ ಸವಾಲು * ಗಾಯದ ಮೇಲೆ ಬರೆ ಎಳೆದ ಕರೊನಾ 

    ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ/ ಮಂಜುನಾಥ್ ಎಂ.ಎನ್. ಚಿಕ್ಕಮಗಳೂರು

    ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪೇಯ. ಅನೇಕ ಸಂಸ್ಕೃತಿಗಳಲ್ಲಿ ಕಾಫಿಗೆ ಪ್ರಮುಖ ಸಾಮಾಜಿಕ ಪ್ರಾಮುಖ್ಯತೆ ಉಂಟು. ಮಲೆನಾಡು ಜಿಲ್ಲೆಗಳ ಆರ್ಥಿಕ ಶಕ್ತಿ ಕಾಫಿ. ಪ್ರತ್ಯಕ್ಷ-ಪರೋಕ್ಷವಾಗಿ ಇಲ್ಲಿನ ಜನ ಕಾಫಿ ಉದ್ದಿಮೆ ಅವಲಂಬಿಸಿದ್ದಾರೆ. ಸತತ ಮೂರು ವರ್ಷ ಸಂಭವಿಸಿದ ಪ್ರಕೃತಿ ವಿಕೋಪ, ಎಲ್ಲೆ ಮೀರಿರುವ ಕಾಡಾನೆ ಉಪಟಳ, ಕರೊನಾ ಲಾಕ್​ಡೌನ್ ಕಾಫಿ ಉದ್ದಿಮೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಪ್ರತಿಕೂಲ ಹವಾಮಾನವೂ ಆರ್ಥಿಕ ಪೆಟ್ಟು ನೀಡುತ್ತಿದೆ.

    ಇಂದು ಕಾಫಿ ದಿನಾಚರಣೆ

    ಕಾಫಿ ಕೃಷಿ ಇಲ್ಲ ಖುಷಿ!ಕಾಫಿ ಕೃಷಿ ಪ್ರಸಕ್ತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ನಡುವೆಯೇ ಕರ್ನಾಟಕ ಬೆಳೆಗಾರರ ಒಕ್ಕೂಟ ಆರನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಅ.1ರಂದು ಸಕಲೇಶಪುರದ ಗುರುದೇವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ. ರಾಜ್ಯ ಸರ್ಕಾರದ ಆಹ್ವಾನಿತ ಸಚಿವರ ಸಮ್ಮುಖದಲ್ಲಿ ಕಾಫಿಯ ಆಂತರಿಕ ಬಳಕೆ ವೃದ್ಧಿ ಮತ್ತು ಚಿಕೋರಿ ಬಳಕೆ ನಿಯಂತ್ರಣದ ಬಗ್ಗೆ ಚಿಂತನ ಮಂಥನ ನಡೆಯಲಿದೆ.

    ಶೇ.80 ಕಾಫಿ ವಿದೇಶಕ್ಕೆ ರಫ್ತಾಗುತ್ತದೆ. ಕರೊನಾ ಲಾಕ್​ಡೌನ್ ಹಿನ್ನೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿದಾರರು ಇಲ್ಲದರಿಂದ ಸ್ಥಳೀಯ ವ್ಯಾಪಾರಿಗಳು ಖರೀದಿ ಮಾಡುತ್ತಿರಲಿಲ್ಲ. ಸಕಾಲದಲ್ಲಿ ಕಾಫಿ ಮಾರಾಟ ಮಾಡಲು ಸಾಧ್ಯವಾಗದೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳಿಂದ ಕಾರ್ವಿುಕರು ತೋಟದ ಕೆಲಸ ಮಾಡಲು ಆಗಮಿಸುತ್ತಿದ್ದರು. ಕರೊನಾ ಕಾರಣಕ್ಕೆ ಹುಟ್ಟೂರಿಗೆ ತೆರಳಿದ್ದಾರೆ. ಇದರಿಂದ ಸದ್ಯದ ಮಟ್ಟಿಗೆ ತೋಟದಲ್ಲಿ ಕೆಲಸ ಮಾಡಲು ಕಾರ್ವಿುಕರ ಕೊರತೆ ಕಾಡುತ್ತಿದೆ. ಅರಣ್ಯದಂಚಿನ ಗ್ರಾಮಗಳಲ್ಲಿರುವ ಕಾಫಿ ತೋಟಕ್ಕೆ ಕಾಡಾನೆಗಳು ಬಂದು ಹೋಗುತ್ತಿವೆ. ಕಾಡಾನೆ ಉಪಟಳದಿಂದ ಅಪಾರ ಪ್ರಮಾಣದಲ್ಲಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ತೋಟದಲ್ಲಿ ಕೆಲಸ ಮಾಡಲು ಕಾರ್ವಿುಕರು ಹಿಂಜರಿಯುತ್ತಿದ್ದಾರೆ.

    ಇದನ್ನೂ ಓದಿ: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

    ದೇಶದ ಶೇ.70 ಉತ್ಪಾದನೆ

    ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದ ಅತ್ಯಂತ ಪರಿಸರ ಸೂಕ್ಷ್ಮ ಹಾಗೂ ಅಪರೂಪದ ಜೀವವೈವಿಧ್ಯತೆಯ ತಾಣದಲ್ಲೇ ಹೆಚ್ಚಾಗಿ ಕಾಫಿ ಬೆಳೆಯಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಶೇ.98.8 ಸಣ್ಣ ಬೆಳೆಗಾರರಿದ್ದು, ಉಳಿದ ಶೇ.1.2 ಮಂದಿ ಮಾತ್ರ ದೊಡ್ಡ ಕಾಫಿ ಬೆಳೆಗಾರರು. ಕಾಫಿ ಕೃಷಿ 6.6 ಲಕ್ಷ ಮಂದಿಗೆ ದೇಶಾದ್ಯಂತ ಉದ್ಯೋಗ ನೀಡಿದ್ದರೆ, ಅವರಲ್ಲಿ 5 ಲಕ್ಷ ಮಂದಿ ಕರ್ನಾಟಕದಲ್ಲೇ ಇದ್ದಾರೆ. ದೇಶದ ಉತ್ಪಾದನೆಯಲ್ಲಿ ಶೇ.70 ಕಾಫಿಯನ್ನು ಕರ್ನಾಟಕವೇ ಬೆಳೆಯುತ್ತಿದೆ. ಉಳಿದಂತೆ ಕೇರಳ, ತಮಿಳುನಾಡು, ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿಗೆ ಬಿಳಿ ಕಾಂಡ ಕೊರಕ ಹಾಗೂ ರೋಬಸ್ಟಾ ಬೆಳೆಗೆ ಬೆರ್ರಿ ಬೋರರ್ ಹಾವಳಿ ತೀವ್ರವಾಗಿದ್ದು, ಬೆಳೆಗಾರರನ್ನು ಹೈರಾಣು ಮಾಡಿದೆ.

    ಇದನ್ನೂ ಓದಿ: ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ

    ಪುನಶ್ಚೇತನಕ್ಕೆ ಬೇಕು ನೆರವು
    ಕಾಫಿ ಕೃಷಿ ಇಲ್ಲ ಖುಷಿ!ಬರ, ಅತಿವೃಷ್ಟಿ, ಅನಾವೃಷ್ಟಿ, ಕರೊನಾ ಸಂಕಷ್ಟದಿಂದ ಕಾಫಿ ಬೆಳೆಗಾರರು ತತ್ತರಿಸಿದ್ದು, ಇಡೀ ಕಾಫಿ ಕೃಷಿ ಹಾಗೂ ಉದ್ಯಮ ತೀವ್ರ ಆರ್ಥಿಕ ಕುಸಿತ ಕಂಡಿದೆ. ಪುನಶ್ಚೇತನಕ್ಕೆ ಪರ್ಯಾಯ ಮಾರ್ಗವಿಲ್ಲದೆ ಬೆಳೆಗಾರರು ಕೇಂದ್ರ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. 2015ರಿಂದ 2018ರವರೆಗೆ ಅನಾವೃಷ್ಟಿಯಿಂದ ಕಾಫಿ ಇಳುವರಿ ಕುಸಿದಿದ್ದರೆ, ಕಳೆದ ವರ್ಷದ ಅತಿವೃಷ್ಟಿ ಹಾಗೂ ಈ ಬಾರಿ ಮಳೆ-ಗಾಳಿಗೆ ಹೆಚ್ಚಿನ ಬೆಳೆ ನಾಶವಾಗಿದೆ. 2018-19ರಲ್ಲಿ ಶೇ.35 ಉತ್ಪಾದನೆ ಕುಂಠಿತವಾಗಿದ್ದರೆ, 2019-20ರಲ್ಲಿ ಸರಾಸರಿ ಶೇ.50 ಇಳುವರಿ ಕುಸಿದಿದೆ. ಕಾಫಿ ರಫ್ತಿಗೆ ಶೇ.3ಕ್ಕೆ ಇಳಿಕೆ ಮಾಡಿರುವ ಪ್ರೋತ್ಸಾಹಧನವನ್ನು ಮತ್ತೆ ಶೇ.5ಕ್ಕೆ ಏರಿಸಬೇಕು. ಆದಾಯ ತೆರಿಗೆ ನಿಯಮ 7ಬಿ (1) ರದ್ದುಗೊಳಿಸಬೇಕು ಎಂಬ ಬೇಡಿಕೆಗಳಿವೆ.

    ಇದನ್ನೂ ಓದಿ: ರಾಮಮಂದಿರಕ್ಕೆ ಶುಭಕೋರಿದ್ದಕ್ಕೆ ಅತ್ಯಾಚಾರದ ಬೆದರಿಕೆ! ಕ್ರಿಕೆಟಿಗನ ಪತ್ನಿಗೆ ಭದ್ರತೆ ನೀಡಿ ಎಂದ ಹೈಕೋರ್ಟ್​

    ಬೆಳೆಗಾರರ ಸಂಕಷ್ಟಕ್ಕೆ ವಿಶೇಷ ಪ್ಯಾಕೇಜ್ ಘೊಷಣೆ, ಅಲ್ಪಾವಧಿ ಬೆಳೆಸಾಲ ವಿತರಣೆ, ರಸಗೊಬ್ಬರ, ಕ್ರಿಮಿನಾಶಕ ಮತ್ತಿತರ ಕೃಷಿ ಸಂಬಂಧಿತ ವಸ್ತುಗಳಿಗೆ ಜಿಎಸ್​ಟಿ ವಿನಾಯಿತಿ, ರಸಗೊಬ್ಬರಕ್ಕೆ ಸಹಾಯಧನ, ಕಾಫಿ ಮಂಡಳಿಗೆ ಬಾಕಿ ಇರುವ ಸಹಾಯಧನ ಒದಗಿಸಬೇಕು ಎನ್ನುತ್ತಾರೆ ಬೆಳೆಗಾರರು. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಮನ ಸೆಳೆದ ಹಿನ್ನೆಲೆಯಲ್ಲಿ ಸೆ.4ರಂದು ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ವೆಬಿನಾರ್​ನಲ್ಲಿ ಕೃಷಿ ಮುಖಂಡರು ಕೇಂದ್ರ ವಿತ್ತ ಸಚಿವರ ಜತೆ ಸಮಸ್ಯೆ ಕುರಿತು ರ್ಚಚಿಸಿದರು. ಸಂಸತ್​ನಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಹಾಗಾಗಿ ಕೇಂದ್ರದಿಂದ ನೆರವು ಸಿಗುವುದೇ ಎಂದು ಚಾತಕ ಪಕ್ಷಿಯಂತೆ ಬೆಳೆಗಾರರು ಕಾಯುತ್ತಿದ್ದಾರೆ.

    ಇದನ್ನೂ ಓದಿ: ಅಮ್ಮ ನನ್ನನ್ನು ಕಾಪಾಡಿ, ಸಾಯಲು ಇಷ್ಟವಿಲ್ಲ: ಹತ್ರಾಸ್ ಗ್ಯಾಂಗ್​ರೇಪ್​​ ಕಿಚ್ಚು ಆರುವ ಮುನ್ನವೇ ಮತ್ತೊಂದು ಹೀನ ಕೃತ್ಯ

    6 ಸಾವಿರ ಕೋಟಿ ರೂ. ವಿದೇಶಿ ವಿನಿಮಯ
    ಕಾಫಿ ಕೃಷಿ ಹಾಗೂ ಉದ್ಯಮ ದೇಶಕ್ಕೆ ಪ್ರತಿವರ್ಷ 5ರಿಂದ 6 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ತಂದುಕೊಡುತ್ತಿದೆ. ಕಾಫಿ ಮಂಡಳಿ ಅಂಕಿ-ಅಂಶದ ಪ್ರಕಾರ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಈಶಾನ್ಯ ರಾಜ್ಯಗಳು ಸೇರಿ ದೇಶದಲ್ಲಿ 4,49,357 ಹೆಕ್ಟೇರ್​ನಷ್ಟು ಕಾಫಿ ಬೆಳೆಯುವ ಪ್ರದೇಶವಿದೆ. ಸರಾಸರಿ 2.7 ಲಕ್ಷ ಮೆಟ್ರಿಕ್ ಟನ್ ರೋಬಸ್ಟಾ, 1.3 ಲಕ್ಷ ಟನ್ ಅರೇಬಿಕಾ ಕಾಫಿ ಉತ್ಪಾದನೆಯಾಗುತ್ತಿದೆ. ದೇಶದಲ್ಲಿ 2,20,825 ಕಾಫಿ ಬೆಳೆಗಾರರಿದ್ದು, ಅವರಲ್ಲಿ 2,18,116 (ಶೇ.98.8) ಸಣ್ಣ ಬೆಳೆಗಾರರು. ಕಾಫಿ ಕೃಷಿ 6.6 ಲಕ್ಷ ಮಂದಿಗೆ ದೇಶಾದ್ಯಂತ ಉದ್ಯೋಗ ನೀಡಿದ್ದು, ಅದರಲ್ಲಿ 5 ಲಕ್ಷ ಮಂದಿ ಕರ್ನಾಟಕದವರೇ ಇದ್ದಾರೆ.

    ಇದನ್ನೂ ಓದಿ: ಚಂದನಾ ಬಣ್ಣದ ಕನಸು ಸೀರಿಯಲ್ಲೂ ಬೇಕು, ಸಿನಿಮಾನೂ ಇಷ್ಟ …

    ಕಾಫಿ ಚರಿತ್ರೆ

    ಕಾಫಿ ಚರಿತ್ರೆ 9ನೇ ಶತಮಾನದಲ್ಲಿ ಆರಂಭವಾಗುತ್ತದೆ. ಕಾಫಿ ಎಂಬ ಪದ ಇಥಿಯೋಪಿಯದ ‘ಕಾಫ’ ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ. 15ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕಾ, ಟರ್ಕಿ ತಲುಪಿತು. 1475ರಲ್ಲಿ ಈಸ್ತಾನ್​ಬುಲ್ ನಗರದಲ್ಲಿ ಮೊದಲ ಕಾಫಿ ಹೋಟೆಲ್ ಪ್ರಾರಂಭವಾಯಿತು. 17ನೇ ಶತಮಾನದ ವೇಳೆಗೆ ಯೂರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ಡಚ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾರಂಭಿಸಿದರು. ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಜಾಗತಿಕ ಉತ್ಪಾದನೆಯಲ್ಲಿ ಶೇ.5 ಪಾಲು ಭಾರತದ್ದು. ಭಾರತದ ಒಟ್ಟು ಉತ್ಪಾದನೆಯ ಶೇ.80 ಇಟಲಿ, ರಷ್ಯಾ, ಜರ್ಮನಿಗೆ ರಫ್ತು ಮಾಡಲಾಗುತ್ತಿದೆ.

    ಶಾಂತಿ ಕದಡಿದ ಆ ಘಟನೆ : ಅಂದು ಏನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts