More

    ರಾಮಮಂದಿರಕ್ಕೆ ಶುಭಕೋರಿದ್ದಕ್ಕೆ ಅತ್ಯಾಚಾರದ ಬೆದರಿಕೆ! ಕ್ರಿಕೆಟಿಗನ ಪತ್ನಿಗೆ ಭದ್ರತೆ ನೀಡಿ ಎಂದ ಹೈಕೋರ್ಟ್​

    ಕೋಲ್ಕತಾ: ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಪತ್ನಿಗೆ ಅತ್ಯಾಚಾರ ಬೆದರಿಕೆ ಬರುತ್ತಿವೆಯಂತೆ. ಇದಕ್ಕೆ ಕಾರಣ, ಅವರು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಶುಭ ಕೋರಿರುವುದಕ್ಕೆ!

    ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸವನ್ನು ಸ್ವಾಗತಿಸಿ ಮೊಹಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಬಂದಿದ್ದವು. ಇದರಿಂದಾಗಿ ತನಗೆ ಮತ್ತು ಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಪೊಲೀಸರ ಮೊರೆ ಹೋಗಿದ್ದರು.

    ಆದರೆ ತಮ್ಮ ಮನವಿಯನ್ನು ಪೊಲೀಸರು ನಿರ್ಲಕ್ಷ್ಯ ಮಾಡಿರುವುದಾಗಿ ದೂರಿ ಅವರು ಕೋಲ್ಕತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಸೀನ್​​​ ಜಹಾನ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್​ ಇಲಾಖೆಗೆ ಹೈಕೋರ್ಟ್​ ಆದೇಶಿಸಿದೆ.

    ಇದನ್ನೂ ಓದಿ: ವಂಚನೆ ತಪ್ಪಿಸಲು  ಡೆಬಿಟ್​-ಕ್ರೆಡಿಟ್​ ಕಾರ್ಡ್​ ಹೊಸ ರೂಲ್ಸ್​: ಏನಿದೆ ಇದರಲ್ಲಿ?

    ಸಾಮಾಜಿಕ ಜಾಲತಾಣದ ಮೂಲಕ ನನ್ನನ್ನು ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ನನಗೆ ಅಸುರಕ್ಷಿತ ಭಾವನೆ ಮೂಡುತ್ತಿದ್ದು, ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ ನಾನು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಯಿದೆ. ಆದರೆ ಪೊಲೀಸರು ತಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹಸೀನ್​ ಅರ್ಜಿಯಲ್ಲಿ ಹೇಳಿದ್ದರು.

    ಅರ್ಜಿದಾರರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಅವರ ದೂರಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

    ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ

    ಹೆಂಡತಿ ತವರಿನಿಂದ ಬರದಿದ್ದರೆ ಏನು ಮಾಡಬೇಕು?

    ನಾವೇ ಸಾಕಿದ ಗಿಣಿ… ಇದ್ಯಾಕೆ ಹೀಗಾಯ್ತೋ… ಮೃಗಾಲಯ ಸಿಬ್ಬಂದಿ ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts