More

    ಜುವೆಂಟಸ್‌ ತಂಡಕ್ಕೆ ಕ್ರಿಶ್ಚಿಯಾನೊ ರೊನಾಲ್ಡೊ ಗುಡ್‌ಬೈ, ಹೊಸ ಕ್ಲಬ್ ಯಾವುದು ಗೊತ್ತಾ?

    ಟ್ಯುರಿನ್: ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಇಟಲಿಯ ಪ್ರತಿಷ್ಠಿತ ಜುವೆಂಟಸ್ ಕ್ಲಬ್ ತ್ಯಜಿಸಿದ್ದಾರೆ. ಮುಂದಿನ ಫುಟ್‌ಬಾಲ್ ಋತುವಿನಲ್ಲಿ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಆಡಲಿದ್ದಾರೆ. ರೊನಾಲ್ಡೊ 12 ವರ್ಷಗಳ ಬಳಿಕ ಮ್ಯಾಂಚೆಸ್ಟರ್​ ಯುನೈಟೆಡ್​ ತಂಡಕ್ಕೆ ಮರಳಿದ್ದಾರೆ.

    36 ವರ್ಷದ ಸ್ಟ್ರೈಕರ್ ರೊನಾಲ್ಡೊ ಜುವೆಂಟಸ್ ಕ್ಲಬ್‌ಗೆ ಗುಡ್‌ಬೈ ಹೇಳುತ್ತಿರುವುದನ್ನು ತಂಡದ ಕೋಚ್ ಮಸ್ಸಿಮಿಲಿಯಾನೊ ಅಲ್ಲೆಗ್ರಿ ಶುಕ್ರವಾರ ಖಚಿತಪಡಿಸಿದ್ದಾರೆ. ರೊನಾಲ್ಡೊ 2018ರಲ್ಲಿ ಜುವೆಂಟಸ್ ತಂಡ ಸೇರಿದ್ದರು ಮತ್ತು 134 ಪಂದ್ಯಗಳಲ್ಲಿ 101 ಗೋಲು ಬಾರಿಸಿದ್ದರು. ಅದಕ್ಕೆ ಮುನ್ನ 2009ರಿಂದ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ ತಂಡದಲ್ಲಿದ್ದರೆ, 2003ರಿಂದ 2009ರವರೆಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿದ್ದರು. ವೈಯಕ್ತಿಕ ಕರಾರು, ವೈದ್ಯಕೀಯ ಮತ್ತು ವೀಸಾ ಸಮಸ್ಯೆಯ ಹೊರತಾಗಿ ರೊನಾಲ್ಡೊ ತಂಡಕ್ಕೆ ಮರಳಲಿರುವುದನ್ನು ಮ್ಯಾಂಚೆಸ್ಟರ್​ ಯುನೈಟೆಡ್​ ತಂಡ ಖಚಿತಪಡಿಸಿದೆ.

    ಇದನ್ನೂ ಓದಿ: VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?

    ರೊನಾಲ್ಡೊ ಅವರನ್ನು ಸೆಳೆದುಕೊಳ್ಳಲು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪ್ರಬಲ ಎದುರಾಳಿ ಮ್ಯಾಂಚೆಸ್ಟರ್ ಸಿಟಿ ತಂಡ ಮೊದಲಿಗೆ ಪ್ರಯತ್ನಿಸಿದ್ದರೂ, ಬಳಿಕ ರೇಸ್‌ನಿಂದ ಹಿಂದೆ ಸರಿಯಿತು. ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ರೊನಾಲ್ಡೊರನ್ನು ಸೆಳೆದುಕೊಳ್ಳುವ ತಂಡಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು.

    ರೊನಾಲ್ಡೊ ಅವರನ್ನು ಬಿಟ್ಟುಕೊಡಬೇಕಾದರೆ ಜುವೆಂಟಸ್ ಕ್ಲಬ್‌ಗೆ ಅವರ ಹೊಸ ತಂಡ 242 ಕೋಟಿ ರೂ. (2.8 ಕೋಟಿ ಯುರೋ) ಪಾವತಿಸಬೇಕಾಗುತ್ತದೆ. ರೊನಾಲ್ಡೊ ಅವರ ಸಮಕಾಲೀನ ಫುಟ್‌ಬಾಲ್ ತಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಬಾರ್ಸಿಲೋನಾ ಕ್ಲಬ್ ತ್ಯಜಿಸಿ ಫ್ರಾನ್ಸ್‌ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದರು.

    ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ ಭವಿನಾಬೆನ್ ಪಟೇಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts