More

    VIDEO| ಫುಟ್​ಬಾಲ್​ ವಿಶ್ವ ದಾಖಲೆ ಮುರಿದ ಕ್ರಿಸ್ಟಿಯಾನೋ ರೊನಾಲ್ಡೋ! 111 ಅಂತರರಾಷ್ಟ್ರೀಯ ಗೋಲ್​ಗಳ ಒಡೆಯ!

    ಲಿಸ್ಬಾನ್: ಪೋರ್ಚುಗಲ್​ನ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಅಂತರರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅತಿ ಹೆಚ್ಚು ಗೋಲ್​ಗಳನ್ನು ಸಾಧಿಸಿರುವ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇಂದು(ಸೆಪ್ಟೆಂಬರ್​2) ನಡೆದ ಫಿಫಾ ವರ್ಲ್ಡ್​​ ಕಪ್​ 2022 ಪಂದ್ಯಾವಳಿಯ ಖ್ವಾಲಿಫೈಯರ್ಸ್​ನಲ್ಲಿ ತಮ್ಮ ತಂಡಕ್ಕೆ ಅರ್ಹತೆ ಗಳಿಸುತ್ತಾ, ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.

    ಪೋರ್ಚುಗಲ್​​ನಲ್ಲಿರುವ ‘ಎಸ್ಟಾಡಿಯೊ ಅಲ್ಗಾರ್ವೆ’ ಕ್ರೀಡಾಂಗಣದಲ್ಲಿ ಐರ್​ಲೆಂಡ್​ ತಂಡದ ವಿರುದ್ಧದ ರೋಮಾಂಚಕ ಫುಟ್​ಬಾಲ್​ ಪಂದ್ಯದಲ್ಲಿ ಪೋರ್ಚುಗಲ್​ ತಂಡ 2:1 ಸ್ಕೋರ್​ನಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ‘ಗೋಲ್​ ಮೆಷಿನ್’​​ ಎಂದು ಕರೆಯಲ್ಪಡುವ 36 ವರ್ಷದ ರೊನಾಲ್ಡೊ ಈ ಐತಿಹಾಸಿಕ ಗೋಲ್​ ಪಡೆದ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಂದ್ಯದ ಕೊನೆಯ ಕ್ಷಣಗಳಲ್ಲಿ ರೊನಾಲ್ಡೊ ತಮ್ಮ ಸಹಆಟಗಾರ ಪಾಸ್​ ಮಾಡಿದ ಬಾಲನ್ನು ತಲೆಯಿಂದ ಹೊಡೆದು ಎದುರಾಳಿಗಳ ಗೋಲ್​ಗೆ ಕಳುಹಿಸಿದರು. ತನ್ಮೂಲಕ ತಂಡಕ್ಕಾಗಿ ಈಖ್ವಲೈಸರ್​ ಪಡೆದದ್ದಲ್ಲದೆ, ಇರಾನಿನ ಆಟಗಾರ ಅಲಿ ಡಾಯಿ ಅವರ 109 ಅಂತರರಾಷ್ಟ್ರೀಯ ಗೋಲ್​ಗಳ ದಾಖಲೆಯನ್ನು ರೊನಾಲ್ಡೊ ಮುರಿದರು. ನಂತರ ಮತ್ತೊಂದು ಅಂತಿಮ ಕ್ಷಣದ ಗೋಲ್​ ಹೊಡೆದು, ಪೋರ್ಚುಗಲ್ ತಂಡಕ್ಕೆ ಜಯ ಗಳಿಸಿಕೊಟ್ಟರು. ಅದರೊಂದಿಗೇ, ತಮ್ಮ ಈವರೆಗಿನ ಗೋಲ್​ಗಳ ಸಂಖ್ಯೆಯನ್ನು 111ಕ್ಕೆ ಏರಿಸಿಕೊಂಡರು.

    ತಮ್ಮ ತಂಡದ ಗೆಲುವನ್ನು ಆಚರಿಸುತ್ತಾ ರೊನಾಲ್ಡೊ ತಮ್ಮ ಅಂಗಿಯನ್ನು ತೆಗೆದು ಸಂಭ್ರಮಿಸಿದರು. ಆದರೆ ಇದಕ್ಕಾಗಿ ಎಲ್ಲೋ ಕಾರ್ಡ್​ ಪಡೆದ ರೊನಾಲ್ಡೊ ಮುಂದಿನ ಮಂಗಳವಾರ ನಡೆಯುವ ಅಜರ್​ಬೈಜನ್​ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ತದನಂತರ ಮುಂದಿನ ಶನಿವಾರ ತಮ್ಮ ಮ್ಯಾಂಚೆಸ್ಟರ್​ ಯುನೈಟೆಡ್​ ತಂಡ ನ್ಯೂಕಾಸಲ್​​ ಯುನೈಟೆಡ್​ ವಿರುದ್ಧ ಆಡಲಿರುವ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts