More

    ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಿಶ್ಚಿತಾರ್ಥ?

    ಲಂಡನ್: ಪೋರ್ಚುಗಲ್ ಮತ್ತು ಜುವೆಂಟಸ್ ಫುಟ್‌ಬಾಲ್ ತಂಡದ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಬಿಸಿಬಿಸಿ ಸುದ್ದಿಗಳು ಹರಿದಾಡುತ್ತಿವೆ. ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರು ಹಾಕಿರುವ ಒಂದೇ ರೀತಿಯ ಪೋಸ್ಟ್ ಇಂಥ ಊಹಾಪೋಹಗಳು ಹರಿದಾಡಲು ಕಾರಣವಾಗಿವೆ.

    ಇಬ್ಬರೂ ಜತೆಯಾಗಿ ಪೋಸ್ ನೀಡಿರುವ ಚಿತ್ರದಲ್ಲಿ ಇಬ್ಬರೂ ಪ್ರಶ್ನೆ ಮತ್ತು ಉತ್ತರ ನೀಡಿದ್ದಾರೆ. ಶನಿವಾರ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ರೊನಾಲ್ಡೊ, ‘ಮೀ ಅಮೋರ್’ ಅಂದರೆ ‘ನನ್ನ ಲವ್’ ಎಂದು ಬರೆದು ಹೃದಯದ ಇಮೋಜಿ ಪ್ರಕಟಿಸಿದ್ದಾರೆ. ಇದೇ ಚಿತ್ರವನ್ನು ರೋಡ್ರಿಗಸ್, ‘ಯೆಸ್’ ಎಂದು ಬರೆದು ಗುಲಾಬಿಯ ಇಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.

    ರೊನಾಲ್ಡೊ ಅವರ ಪ್ರೇಮ ನಿವೇದನೆಯನ್ನು ರೊನಾಲ್ಡೊ ಒಪ್ಪಿಕೊಂಡಿದ್ದಾರೆ ಎಂದೇ 2 ಪೋಸ್ಟ್‌ಗಳನ್ನು ಅಭಿಮಾನಿಗಳು ವಿಶ್ಲೇಷಿಸಿದ್ದಾರೆ. ಚಿತ್ರದಲ್ಲಿ ರೊನಾಲ್ಡೊ, ರೋಡ್ರಿಗಸ್‌ರ ಬಲಗೈಯನ್ನು ಹಿಡಿದುಕೊಂಡಿದ್ದಾರೆ. ಆದರೆ ಇದರಲ್ಲಿ ಬೆರಳುಗಳು ಕಾಣಿಸದ ಕಾರಣ, ರಿಂಗ್ ಕಂಡುಬಂದಿಲ್ಲ.

    ಇದನ್ನೂ ಓದಿ: ಧೋನಿ-ರೋಹಿತ್ ಶರ್ಮ ಅಭಿಮಾನಿಗಳ ನಡುವೆ ಗಲಾಟೆ!

    ರೊನಾಲ್ಡೊ ಮತ್ತು ರೋಡ್ರಿಗಸ್ 2017ರಿಂದ ಡೇಟಿಂಗ್‌ನಲ್ಲಿದ್ದು, ಇತ್ತೀಚೆಗೆ ಸಹ-ಜೀವನವನ್ನೂ ನಡೆಸುತ್ತಿದ್ದಾರೆ. ಈಗಾಗಲೆ ನಾಲ್ವರು ಮಕ್ಕಳನ್ನು ಹೊಂದಿರುವ 35 ವರ್ಷದ ರೊನಾಲ್ಡೊ, ಈ ಪೈಕಿ ಸ್ಪೇನ್‌ನ 26 ವರ್ಷದ ರೋಡ್ರಿಗಸ್ ಅವರಿಂದ ಓರ್ವ ಪುತ್ರಿಯನ್ನು ಪಡೆದಿದ್ದಾರೆ. ಉಳಿದಂತೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಬಾಡಿಗೆ ತಾಯಿಯ ಮೂಲಕ ಪಡೆದಿದ್ದಾರೆ. ಇದೀಗ ಕೊನೆಗೂ ರೊನಾಲ್ಡೊ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆಯೇ ಎಂಬ ಕೌತುಕ ಎದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts