More

    ಚುನಾವಣಾ ಅಕ್ರಮಗಳಲ್ಲಿ ಭಾಗಿಯಾದರೆ ಕ್ರಿಮಿನಲ್ ಮೊಕದ್ದಮೆ ಖಚಿತ

    ಚಿತ್ರದುರ್ಗ: ಈಗಾಗಲೇ ಜಾರಿಯಾಗಿರುವ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಪಾಲನೆ ಕಡ್ಡಾಯ. ಆಮಿಷಗಳಿಗೆ ಒಳಗಾಗಿ ಚುನಾವಣಾ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗತ್ತದೆ ಎಂದು ಜಿಲ್ಲಾಧಿ ಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

    ಡಿಸಿ ಕಚೇರಿಯಲ್ಲಿ ಗುರುವಾರ ಮಹಿಳಾ ಸಂಘಗಳ ಪ್ರಮುಖರು,ಮದ್ಯ ಮಾರಾಟಗಾರರು ಹಾಗೂ ಮುದ್ರಣಾಲಯಗಳ ಮಾ ಲೀಕರ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಚುನಾವಣೆ ಸಮಯದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಚಟುವಟಿಕೆಗಳ ಕುರಿತಂತೆ ಆಯೋಗ ನಿಗಾ ವಹಿಸಿದೆ.

    ರಾಜಕೀಯ ಆಮಿಷಗಳಿಗೆ ಸಂಘಗಳು ಒಳಗಾಗಬಾರದು. ಅಕ್ರಮ ಹಣ ವಹಿವಾಟಿಗೆ ನೆರವಾಗುವಂತೆ ರಾಜಕೀಯ ಪಕ್ಷಗಳು ಸ್ವ ಸಹಾಯ ಗುಂಪುಗಳನ್ನು ಕೋರಬಹುದು. ಆದ್ದರಿಂದ ಗುಂಪುಗಳ ಪ್ರಮುಖರು,ಸದಸ್ಯರು ಎಚ್ಚರ ವಹಿಸಬೇಕು. ಸಂಘಗಳ ಖಾತೆಗೆ ಅನಧಿಕೃತವಾಗಿ ಹಣ ಜಮಾ ಮಾಡುವುದು,ಸದಸ್ಯರಿಗೆ ಹಂಚುವುದು ಕಂಡುಬಂದರೆ ಅಂತಹ ಸಂಘಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು.

    ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ,ಮಹಿಳಾ ಸ್ವ ಸಹಾಯ ಸಂಘಗಳು ನಿತ್ಯದ ಹಣಕಾಸಿನ ವ್ಯವಹಾರದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ನೀಡಬೇಕು. ಸಂಘಗಳ ಸದಸ್ಯರು ಕಡ್ಡಾಯವಾಗಿ ಮತ ಚಲಾ ಯಿಸುವುದರೊಂದಿಗೆ ಕುಟುಂಬದವರನ್ನೂ ಮತ ಚಲಾಯಿಸಲು ಪ್ರೇರೇಪಿಸಬೇಕು ಜಿ.ಪಂ ಸಿಇಓ ಎಂ.ಎಸ್.ದಿವಾಕರ ಹೇಳಿದರು.

    ಮಾಹಿತಿ ನೀಡಿ

    ನಿಯಮ ಮೀರಿ ಹೆಚ್ಚಿನ ಮದ್ಯವನ್ನು ಯಾರಿಗೂ ಮಾರಾಟ ಮಾಡಬಾರದು. ದೊಡ್ಡ ಪ್ರಮಾಣದಲ್ಲಿ ಮದ್ಯ ಖರೀದಿಗೆ ಬಂದರೆ ಮಾಹಿತಿ ನೀಡಬೇಕೆಂದು ಮದ್ಯದಂಗಡಿ ಮಾಲೀಕರಿಗೆ ಡಿಸಿ ತಿಳಿಸಿದರು. ಅಕ್ರಮಗಳಲ್ಲಿ ಭಾಗಿಯಾದರೆ ಸನ್ನದು ರದ್ದುಗೊಳಿಸಿ,ಮೊಕ ದ್ದಮೆ ಹೂಡಲಾಗುವುದು. ಯಾವುದೇ ಚುನಾವಣಾ ಅಕ್ರಮಗಳಲ್ಲಿ ಚುನಾವಣಾ ಅಕ್ರಮಗಳ ಅಪರಾಧಿಗಳಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದರು.

    ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣದ ಕುರಿತು ಮಾಹಿತಿ ನೀಡುವಂತೆ ಮುದ್ರ ಣಾಲಯದ ಮಾಲೀಕರಿಗೆ ಸೂಚಿಸಿದರು. ಎಡಿಸಿ ಟಿ.ಜವರೇಗೌಡ,ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ಅಬಕಾರಿ ಉಪ ಆಯುಕ್ತ ಬಿ.ಮಾದೇಶ್,ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ ಬಣಕಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳಿದ್ದರು.

    ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ

    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸ ಬೇ ಕೆಂದು ಡಿಸಿ ಆದೇಶಿಸಿದ್ದಾರೆ. ಎಸ್‌ಬಿಎಂಎಲ್,ಎಸ್‌ಬಿಬಿಎಲ್,ಡಿಬಿಬಿಎಲ್,ಡಿಬಿಎಂಎಲ್,ರಿವಾಲ್ವಾರ್ ಹಾಗೂ ಪಿಸ್ತೂಲ್ ಇತ್ಯಾದಿ ಒಪ್ಪಿಸುವಂತೆ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts