More

    ಗುರುಪೂರ್ಣಿಮೆಯ ದಿನ ಕ್ರಿಕೆಟ್​ ತಾರೆಯರಿಂದ ಗುರುಗಳಿಗೆ ನಮನ

    ಬೆಂಗಳೂರು: ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲೂ ಗುರುಗಳ ಪಾತ್ರ ಪ್ರಮುಖವಾದುದು. ಕ್ರಿಕೆಟಿಗರ ಪಾಲಿಗೆ ಕೋಚ್​ಗಳೇ ಗುರುಗಳು. ಕೋಚ್​ ಸಮರ್ಥ ತರಬೇತಿ ನೀಡಿದರೆ ಕ್ರಿಕೆಟಿಗರು ಟೀಮ್​ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಸ್ಟಾರ್​ಗಳಾಗಿ ಬೆಳೆಯುತ್ತಾರೆ. ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​ ಅವರ ವೃತ್ತಿಜೀವನದ ಯಶಸ್ಸಿನಲ್ಲಿ ಕೋಚ್​ ರಮಾಕಾಂತ್​ ಆಚ್ರೇಕರ್​ ಪಾಲು ಅಮೋಘವಾದುದು. ಗುರುಪೂರ್ಣಿಮೆಯ ದಿನವಾದ ಭಾನುವಾರ ಕ್ರಿಕೆಟ್​ ತಾರೆಯರು ತಮ್ಮ ಗುರುಗಳಿಗೆ ನಮಿಸಿದ್ದಾರೆ. ಈ ಮೂಲಕ ಶಿಷ್ಯರೂ ಸಾರ್ಥಕತೆ ಪಡೆದುಕೊಂಡಿದ್ದಾರೆ.

    ‘ಗುರುಪೂರ್ಣಿಮೆಯ ದಿನದಂದು ನಾನು ನನಗೆ ಕಲಿಸಿದ ಮತ್ತು ನಾನು ಶ್ರೇಷ್ಠ ನಿರ್ವಹಣೆ ತೋರುವಂತೆ ಸ್ಫೂರ್ತಿ ತುಂಬಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಚಿನ್ ತೆಂಡುಲ್ಕರ್​ ಟ್ವೀಟಿಸಿದ್ದಾರೆ. ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ಅವರು, ‘ಗುರುಪೂರ್ಣಿಮೆಯ ದಿನದಂದು ನಾನು ನನ್ನ ಎಲ್ಲ ಗುರುಗಳು, ಟೀಚರ್​ಗಳು, ಮೆಟರ್​ಗಳಿಗೆ ಧನ್ಯವಾದ ಹೇಳುತ್ತೇನೆ. ನಾನಿಂದು ಏನಾಗಿದ್ದೇನೋ ಅದೆಲ್ಲವೂ ಅವರಿಂದಲೇ ಆಗಿದ್ದು. ಅವರ ಬೆಂಬಲ, ಮಾರ್ಗದರ್ಶನಗಳಿಗೆ ಕೃತಜ್ಱನಾಗಿದ್ದೇನೆ. ಅವರಿಂದ ಕಲಿತ ಎಲ್ಲದಕ್ಕೂ ನ್ಯಾಯ ಸಲ್ಲಿಸಿರುವ ಭರವಸೆಯಲ್ಲಿದ್ದೇನೆ. ನನ್ನ ಜೀವನದ ಮೂಲಕ ಇತರರಿಗೂ ಸ್ಫೂರ್ತಿ ತುಂಬಲು ಪ್ರಯತ್ನಿಸುತ್ತೇನೆ. ಹ್ಯಾಪಿ ಗುರುಪೂರ್ಣಿಮಾ’ ಎಂದು ಟ್ವೀಟಿಸಿದ್ದಾರೆ. ಮತ್ತೋರ್ವ ಎಡಗೈ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಕೂಡ ಗುರುವಿಗೆ ನಮನ ಸಲ್ಲಿಸಿದ್ದಾರೆ.

    ಇದನ್ನೂ ಓದಿ: 25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಅವರೂ ತಮ್ಮ ಗುರು ರಮಾಕಾಂತ್​ ಆಚ್ರೆಕರ್​ ಅವರನ್ನು ನೆನೆಸಿಕೊಂಡಿದ್ದು, ‘ನಾನು ಆಚ್ರೆಕರ್​ ಸರ್​ ಅವರನ್ನು ಭೇಟಿಯಾಗುತ್ತಿದ್ದಾಗಲೆಲ್ಲಾ ಅವರ ಕಾಲಿಗೆ ನಮಿಸುತ್ತಿದ್ದೆ. ನನ್ನ ಪುತ್ರ ಕ್ರಿಶ್ಚಿಯಾನೋಗೂ ಅದನ್ನೇ ಕಲಿಸಿದ್ದೆ. ಅವರಿಂದ ಕಲಿತವುಗಳನ್ನು ಈಗಿನ ಯುವ ತಲೆಮಾರಿಗೆ ವರ್ಗಾಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಟ್ವೀಟಿಸಿದ್ದಾರೆ.

    ಟೀಮ್​ ಇಂಡಿಯಾ ಆಲ್ರೌಂಡರ್ ಹಾರ್ದಿಕ್​ ಪಾಂಡ್ಯ ಅವರು ತಮ್ಮ ವೃತ್ತಿಜೀವನಕ್ಕೆ ಹೊಸ ದಿಕ್ಕು ತೋರಿದ ನ್ಯೂಜಿಲೆಂಡ್​ನ ಜಾನ್​ ರೈಟ್​ ಅವರಿಗೆ ನಮಿಸಿದ್ದಾರೆ. ಭಾನುವಾರ ಜಾನ್​ ರೈಟ್​ ಅವರ ಜನ್ಮದಿನವೂ ಆಗಿದ್ದು, ನನ್ನ ಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಕ್ಕೆ ಧನ್ಯವಾದಗಳು. ನನಗೆ ಕಲಿಸಿದ ಎಲ್ಲ ಟೀಚರ್​ಗಳಿಗೂ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ. ಮಾಜಿ ಬ್ಯಾಟ್ಸ್​ಮನ್​ ಮೊಹಮದ್​ ಕೈಫ್​ ಕೂಡ ಜಾನ್​ ರೈಟ್​ಗೆ ಜನ್ಮದಿನದ ಶುಭಾಶಯ ತಿಳಿಸುವ ಜತೆಗೆ ಗುರುಪೂರ್ಣಿಮೆಯ ನಮನವನ್ನೂ ಸಲ್ಲಿಸಿದ್ದಾರೆ.

    ಇದನ್ನೂ ಓದಿ: PHOTOS | ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧುಗೆ 25ನೇ ಬರ್ತ್​ಡೇ ಸಂಭ್ರಮ, ಶುಭಾಶಯಗಳ ಸುರಿಮಳೆ

    ಮಾಜಿ ಆಲ್ರೌಂಡರ್​ ಇರ್ಫಾನ್​ ಪಠಾಣ್​ ಕೂಡ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಕೋಚ್​ ಟಿಎ ಶೇಕರ್​ ಮತ್ತು ತಮ್ಮ ಕ್ರಿಕೆಟ್​ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ತರಬೇತುದಾರರಿಗೆ ಧನ್ಯವಾದ ಹೇಳಿದ್ದಾರೆ.

    ಹಿತಾಸಕ್ತಿ ಅಡಕತ್ತರಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts