More

    ಕ್ರಿಕೆಟ್ ಆಡುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ

    ಅಹಮದಾಬಾದ್​​: ಹಠಾತ್​ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಲ್ಲೊಬ್ಬ ವ್ಯಕ್ತಿ ಕ್ರಿಕೆಟ್​ ಆಡುತ್ತಾ ಮೈದಾನದಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ಅಹಮದಾಬಾದ್​​ನಲ್ಲಿ ನಡೆದಿದೆ.

    ವಸಂತ್ ರಾಥೋಡ್ (34) ಮೃತ ದುರ್ದೈವಿ. ಇವರು ರಾಜ್ಯ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಿಕೆಟ್​ ಪಂದ್ಯ ಆಡುತ್ತಿದ್ದಾಗ ಹೃದಯಾಘಾತವಾಗಿದೆ. ಆಟದ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಇದನ್ನೂ ಓದಿ: ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ವಿದ್ಯಾರ್ಥಿನಿ: ಜೀರೋ ಟ್ರಾಫಿಕ್​​ನಲ್ಲಿ ಕರೆದೊಯ್ದ ಪೊಲೀಸ್

    ಎಂದಿನಂತೆ ವಸಂತ್ ಕ್ರಿಕೆಟ್ ಆಡುತ್ತಿದ್ದರು. ಅಂತೆಯೇ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯಾಸ ಉಂಟಾಗಿ ಅಲ್ಲಿಯೇ ಕುಸಿದಿದ್ದಾರೆ. ಜೊತೆಯಲ್ಲಿದ್ದವರು ವಸಂತ್​ನನ್ನು ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವಸಂತ್ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

    VIDEO| ಕೋತಿಯನ್ನು ಮರಕ್ಕೆ ಬಿಗಿದು ಕೊಂದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts