More

    ಕಿಂಗ್ ಕೋಬ್ರಾ ಚಾಂಪಿಯನ್, ವಾರಿಯರ್ಸ್‌ ತಂಡ ರನ್ನರ್ ಅಪ್

    ಯಲಬುರ್ಗಾ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನ್ಯೂ ಪವರ್ ಸ್ಟಾರ್ ಕ್ರಿಕೆಟ್ ಕ್ಲಬ್‌ನಿಂದ ಆಯೋಜಿಸಲಾಗಿದ್ದ ರಾಯಲ್ ಯಲಬುರ್ಗಾ ಪ್ರೀಮಿಯರ್ ಲೀಗ್ ಸೀಜನ್-5ರಲ್ಲಿ ಕಿಂಗ್ ಕೋಬ್ರಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಕಿಂಗ್ ಕೋಬ್ರಾ ತಂಡ ಬಾರ್ನ್ ಎ ಫೈಯರ್ ವಾರಿಯರ್ಸ್‌ ತಂಡವನ್ನು ಮಣಿಸಿ ಟ್ರೋಫಿ ಪಡೆಯಿತು. ವಿಜೇತ ತಂಡಕ್ಕೆ 50 ಸಾವಿರ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 30 ಸಾವಿರ ರೂ. ಬಹುಮಾನ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.

    ನಾಗರಾಜ ಛಲವಾದಿ ಸರಣಿ ಶ್ರೇಷ್ಠ, ಕೀರ್ತಿ ಛಲವಾದಿ ಬ್ಯಾಟಿಂಗ್, ಶಂಕರ ಬಣಕಾರ ಬೌಲಿಂಗ್, ಗವಿ ಕುಂಬಾರ ಕೀಪಿಂಗ್, ಜಾನ್ ಬಣಕಾರ, ನವೀನ್ ಶ್ಯಾಗೋಟಿ ಯುವ ಆಟಗಾರ, ದೊಡ್ಡಯ್ಯ ಚಂಡೂರು ಉತ್ತಮ ಕ್ಯಾಚ್, ಗುರುರಾಜ ಛಲವಾದಿ ವೇಗದ ಅರ್ಧ ಶತಕ, ಕೀರ್ತಿ ಛಲವಾದಿ ಹಾಗೂ ವೀರೇಶ ಛಲವಾದಿ ಶತಕ, ಕಿಶೋರ ಗದ್ದಿ ಕ್ಷೇತ್ರ ರಕ್ಷಕ ವಿಭಾಗದಲ್ಲಿ ಪಶಸ್ತಿ ಪಡೆದರು.

    ಪ್ರಮುಖರಾದ ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಭಾವಿಮನಿ, ಸದಸ್ಯರಾದ ಅಂದಯ್ಯ ಕಳ್ಳಿಮಠ, ರಿಯಾಜ್‌ಅಹ್ಮದ್ ಖಾಜಿ, ಹನುಮಂತ ಭಜಂತ್ರಿ, ರಾಜು ಕುಲಕರ್ಣಿ, ಭೀಮರಡ್ಡಿ ಶ್ಯಾಡ್ಲಗೇರಿ, ಶರೀಫ್ ಕೊತ್ವಾಲ್, ಅಲ್ಲಾಸಾಬ ಕಟ್ಟಿಮನಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts