More

    ವೈರಲ್ ಆಯ್ತು ಕ್ವಾರಂಟೈನ್ ಕ್ರಿಕೆಟ್ ವಿಡಿಯೋ….!

    ಬೆಂಗಳೂರು: ಮಹಾಮಾರಿ ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದರಿಂದಾಗಿ ಕಳೆದ ಮೂರು ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ತಬ್ಧಗೊಂಡಿದೆ. ದೇಶದಾದ್ಯಂತ ಲಕ್ಷಾಂತರ ಕ್ವಾರೆಂಟೈನ್ ಸೆಂಟರ್‌ಗಳು ತಲೆಎತ್ತಿವೆ. ಕಡ್ಡಾಯ ಕ್ವಾರೆಂಟೈನ್‌ಗೆ ಒಳಗಾದವರು ಪುಸ್ತಕ ಓದುವುದು, ಟೀವಿ ನೋಡುವುದು, ಹೆಚ್ಚಾಗಿ ಮೊಬೈಲ್‌ನಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ, ಕ್ವಾರಂಟೈನ್ ಕೇಂದ್ರವೊಂದರಲ್ಲಿ ಅಲ್ಲಿದ್ದ ಮಂದಿ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ‘ಇದಕ್ಕಾಗಿ ನಾನು ಇಂಡಿಯಾವನ್ನು ತುಂಬಾ ಇಷ್ಟಪಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಬಾಡಿಬಿಲ್ಡಿಂಗ್ ಸೀಕ್ರೆಟ್ ಬಿಚ್ಚಿಟ್ಟ 8 ಬಾರಿ ಮಿಸ್ಟರ್ ಒಲಂಪಿಯಾ ರೋನಿ ಕೊಲ್ಮಾನ್…

    ಟೈಂ ಪಾಸ್‌ಗಾಗಿ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವಿಡಿಯೋ ಟ್ವೀಟ್ ಮಾಡುವ ಮೂಲಕ ಭಾರತೀಯರಲ್ಲಿ ಇರುವ ಕ್ರಿಕೆಟ್ ಪ್ರೀತಿ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಯಾವ ಕ್ವಾರಂಟೈನ್ ಕೇಂದ್ರದ ವಿಡಿಯೋ ಇದು ಎಂದು ಎಲ್ಲೂ ಬಹಿರಂಗವಾಗಿಲ್ಲ.

    ಇದನ್ನೂ ಓದಿ: ಪಿಟಿ ಉಷಾಗೆ ಒಲಿಂಪಿಕ್ಸ್ ಪದಕ ಕೈತಪ್ಪಿದಾಗ ಚಿನ್ನ ಗೆದ್ದ ಅಥ್ಲೀಟ್ ಕೂಡ ಅತ್ತಿದ್ದಳು!

    ಕಳೆದ ಮಾರ್ಚ್ ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ಥಗಿತಗೊಂಡಿದೆ. ಮಾರ್ಚ್ 29 ರಿಂದ ನಡೆಯಬೇಕಿದ್ದ 13ನೇ ಐಪಿಎಲ್ ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆಯಾಗಿದೆ. ಮಾರ್ಚ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಧ್ಯದಲ್ಲಿಯೇ ಸರಣಿ ಮೊಟಕುಗೊಳಿಸಿ ತವರಿಗೆ ವಾಪಸಾಗಿತ್ತು. ಒಂದು ವೇಳೆ ಐಸಿಸಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿ ಮುಂದೂಡಿಕೆದರೆ ಬಿಸಿಸಿಐ ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ಆಯೋಜಿಸುವ ಯೋಜನೆ ರೂಪಿಸಿಕೊಂಡಿದೆ. ಬುಧವಾರ ನಡೆದ ಐಸಿಸಿ ಸಭೆಯೂ ಜುಲೈ ತಿಂಗಳಿಗೆ ಮುಂದೂಡಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts