More

    ಸೈನ್ಯ ಸೇರಲು ಯುವಕರಲ್ಲಿ ಜಾಗೃತಿ ಮೂಡಿಸಿ

    ಚಿಕ್ಕಮಗಳೂರು: ಭಾರತೀಯ ಯೋಧರು ನೆರೆದೇಶದ ಜತೆೆ ಶಾಂತಿ ಕಾಪಾಡಲೂ ಸೈ, ತಿರುಗಿಬಿದ್ದರೆ ಸಮರಕ್ಕೂ ಸೈ ಎನ್ನುವುದಕ್ಕೆ ಕಾರ್ಗಿಲ್ ಯುದ್ಧ ನಿದರ್ಶನ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಹೇಳಿದರು.

    ತಾಪಂ ಸಭಾಂಗಣದಲ್ಲಿ ಮಾಜಿ ಸೈನಿಕರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಸೈನಿಕರ ಕಾರ್ಯವೈಖರಿ ಕುರಿತು ಸಮಾಜ ಹಾಗೂ ಮುಖ್ಯವಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸೈನಿಕರ ಜೀವನ, ತ್ಯಾಗ ಹಾಗೂ ಬಲಿದಾನದ ಬಗ್ಗೆ ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿ ಸೈನಿಕರಾಗಬೇಕೆಂಬ ಮನೋಭಾವ ಯುವಕರಲ್ಲಿ ಮೂಡಲಿದೆ ಎಂದು ತಿಳಿಸಿದರು.
    ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಮಾತನಾಡಿ, ದೇಶದ ಯಾವ ವಿಶ್ವವಿದ್ಯಾಲಯಗಳಲ್ಲಿ ಕಲಿಸದ ಪಾಠವನ್ನು ಸೈನಿಕ ವೃತ್ತಿ ಕಲಿಸುತ್ತದೆ. ನಾನು ಉನ್ನತ ಅಧಿಕಾರಿಯಾಗಲು ಸೈನಕರಲ್ಲಿರುವ ಶಿಸ್ತು, ಸಂಯಮವನ್ನು ಗಮನಿಸಿದ್ದೇ ಮೂಲ ಕಾರಣ. ಆ ಹಿನ್ನೆಲೆಯಲ್ಲಿ ಇಂದಿನ ಯುವಪೀಳಿಗೆಯು ದೇಶ ಸೇವೆಯಲ್ಲಿ ತೊಡಗಲು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
    ತಾಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮೂಲಕ ಸಂಘದ ಕಚೇರಿವರೆಗೆ ಮಾಜಿ ಸೈನಿಕರು ಮೆರವಣಿಗೆ ನಡೆಸಿದರು.
    ತಾಪಂ ಇಒ ಜಯಸಿಂಹ, ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್, ವಕೀಲ ಲಕ್ಷ್ಮಣ ಗೌಡ, ಸಂಘದ ಗೌರವಾಧ್ಯಕ್ಷ ಪಿ.ಎನ್.ನಾಗರಾಜ್, ಉಪಾಧ್ಯಕ್ಷ ಹರೀಶ್, ಜಂಟಿ ಕಾರ್ಯದರ್ಶಿ ರಾಜೇಗೌಡ, ಕಾರ್ಯದರ್ಶಿ ಸಿ.ಟಿ.ಗೋಪಾಲಕೃಷ್ಣ, ಖಜಾಂಚಿ ಸೆಲ್ವಧರ್ ಪಾಯಿಸ್, ನಿರ್ದೇಶಕರಾದ ರಾಮಯ್ಯ, ಮೂಡಿಗೆರೆ ತಾಲೂಕು ಅಧ್ಯಕ್ಷ ಎಂ.ಕೆ.ಚಂದ್ರೇಶ್, ಸುಮತಿ ಕುಮಾರಸ್ವಾಮಿ, ಮಂಜುನಾಥ ಸ್ವಾಮಿ, ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts