More

    ದ್ವಿಚಕ್ರವಾಹನದಲ್ಲಿ 4 ವರ್ಷದೊಳಗಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ವೇಗ ಮಿತಿ ಕೂಡ ಅನ್ವಯ…

    ನವದೆಹಲಿ: ಅಪಘಾತ ನಿಯಂತ್ರಣ ಹಾಗೂ ಮಕ್ಕಳೊಂದಿಗಿನ ಸವಾರಿ ವೇಳೆ ಹೆಚ್ಚಿನ ಸುರಕ್ಷತೆಗಾಗಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಕ್ಕಳಿಗೂ ಹೆಲ್ಮೆಟ್​ ಕಡ್ಡಾಯಗೊಳಿಸಲಾಗಿದೆ.

    ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಅವರಿಗೆ ಕ್ರ್ಯಾಷ್​ ಹೆಲ್ಮೆಟ್ ಕಡ್ಡಾಯ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತಿಳಿಸಿದೆ. ಮಾತ್ರವಲ್ಲ ಅಂಥ ದ್ವಿಚಕ್ರ ವಾಹನಗಳ ವೇಗವನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧಿಸಲಾಗಿದೆ.

    ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಈ 4 ವರ್ಷದ ಒಳಗಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮತ್ತು ಅಂಥ ವಾಹನಗಳ ವೇಗಕ್ಕೂ ನಿರ್ಬಂಧ ವಿಧಿಸುವ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts