More

    ಇಂತಹ ರಸ್ತೆಗಳಲ್ಲೂ ಅಪಘಾತವಾಗುತ್ತಾ? ಸರ್ಕಾರ ನೀಡಿರುವ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ

    ನವದೆಹಲಿ: ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಇತ್ತೀಚೆಗೆ ನೀಡಿದ ವರದಿಯೊಂದು ಬಹಿರಂಗಪಡಿಸಿತ್ತು. ಇನ್ನು ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಹುಡುಕಿ ಹೊರಟ ಸರ್ಕಾರಕ್ಕೆ ಸಿಕ್ಕ ಉತ್ತರ ಮಾತ್ರ ಶಾಕ್​ ನೀಡಿದೆ.

    ಭಾರತದಲ್ಲಾಗುತ್ತಿರುವ ರಸ್ತೆ ಅಪಘಾತ ಪ್ರಕರಗಳು ಹಲವು ಕಾರಣಗಳಿಂದ ಆಗುತ್ತಿವೆ. ಅದರಲ್ಲಿ ಮೊದಲನೆಯದಾಗಿ ರಸ್ತೆ ನಿಮಯ ಪಾಲನೆ ಇಲ್ಲದಿರುವುದು, ಸುರಕ್ಷತಾ ಕ್ರಮ ಅನುಸರಿಸದಿರುವುದು ಇನ್ನೂ ಅತಿ ವೇಗದ ಚಾಲನೆ ಹೊರತುಪಡಿಸಿಯೂ ಅಪಘಾತ ಪ್ರಕರಗಳು ಹೆಚ್ಚುತ್ತಿವೆ.2020ರಲ್ಲಿ ಶೇ.65ರಷ್ಟು ರಸ್ತೆ ಅಪಘಾತಗಳು ನೇರವಾದ ರಸ್ತೆಯಲ್ಲೇ ಆಗಿದ್ದು, ಇನ್ನು ಶೇ.70ರಷ್ಟು ಅಪರಾಧಗಳು ಉತ್ತಮ ವಾತಾವರಣ ಇದ್ದಾಗಲೇ ಆಗಿದೆ. ಎಂಬ ಮಾಹಿತಿಯನ್ನು ಸರ್ಕಾರ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

    2020ರಲ್ಲಿ ದೇಶದಲ್ಲಿ 3.66ಲಕ್ಷ ಅಪಘಾತಗಳು ನಡೆದಿವೆ. ಇದರಲ್ಲಿ 1.31 ಲಕ್ಷ ಜನರು ಸಾವಿಗೀಡಾಗಿದ್ದು, 3.48ಲಕ್ಷ ಜನರು ಗಾಯಗೊಂಡಿದ್ದಾರೆ. ಇದರಲ್ಲಿ 2.37ಲಕ್ಷ ಜನರು ನೇರವಾದ ರಸ್ತೆಯಲ್ಲೇ ಅಪಘಾತಕ್ಕೀಡಾಗಿದ್ದಾರೆ. ಇದರಲ್ಲೂ 85,000 ಜನ ಸಾವನ್ನಪ್ಪಿದ್ದಾರೆ.ಇನ್ನು 2.61 ಲಕ್ಷ ಜನರು ಉತ್ತಮ ವಾತಾವರಣವಿದ್ದಾಗಲೇ ಅಪಘಾತ ಸಂಭವಿಸಿದ್ದು, ಇದರಲ್ಲಿ 88,239 ಮಂದಿ ಮೃತಪಟ್ಟಿರುವುದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವಾಲಯ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

    ಸಾಮಾನ್ಯವಾಗಿ ಚೂಪಾದ ವಕ್ರಾಕೃತಿಗಳು, ಗುಂಡಿಗಳು ಮತ್ತು ಕಡಿದಾದ ಶ್ರೇಣಿಗಳನ್ನು ಹೊಂದಿರುವ ರಸ್ತೆಗಳನ್ನು ಅಪಘಾತ ಪೀಡಿತ ಎಂದು ಗುರುತಿಸಲಾಗುತ್ತದೆ. ಆದರೆ ಇಂತಹ ರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿರುವುದು ಕೇಂದ್ರ ಸರ್ಕಾರಕ್ಕೆ ಅಚ್ಚರಿ ತರಿಸಿದೆ. (ಏಜೆನ್ಸೀಸ್​)

    ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

    ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಕೊಹ್ಲಿ ಗೈರು: ಮತ್ತೆ ಕೆಣಕಿದ ಕಪಿಲ್​ ದೇವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts