More

    ಪಟಾಕಿ ತರುವಾಗ ಎಚ್ಚರ; ಅಪ್ಪ-ಮಗ ಇಬ್ಬರನ್ನೂ ಬಲಿ ಪಡೆಯಿತು ಇದೊಂದು ತಪ್ಪು!

    ಪುದುಚೇರಿ: ಇಂದು ನಾಳೆ ಪಟಾಕಿ ಹೊಡೆಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಅದಕ್ಕಾಗಿ ನಿನ್ನೆಯಿಂದಲೇ ಪಟಾಕಿ ಖರೀದಿ ಜೋರಾಗಿದ್ದು, ಹಾಗೆ ಖರೀದಿಸಿದ ಪಟಾಕಿಯನ್ನು ಸಾಗಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಲ್ಲೊಂದು ಕಡೆ ಅಂಥ ಪಟಾಕಿ ಮೂಟೆ ಅಪ್ಪ-ಮಗ ಇಬ್ಬರನ್ನೂ ಬಲಿ ಪಡೆದಿದೆ.

    ಪುದುಚೇರಿಯ ಅರಿಯನ್​ಕುಪ್ಪಮ್​ ನಗರದ ನಿವಾಸಿ ಕಲೈನೇಶನ್​ (32) ಮತ್ತು ಅತನ ಪುತ್ರ ಪ್ರದೀಶ್​ (7) ಪಟಾಕಿ ಮೂಟೆಗೆ ಬಲಿಯಾದವರು. ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ಈ ದುರಂತ ಸಂಭವಿಸಿದೆ.

    ಕೊಟ್ಟಕುಪ್ಪಂ ಬಳಿ ಪಟಾಕಿ ಚೀಲದಲ್ಲಿದ್ದ ಸುಡುಮದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಪ್ಪ-ಮಗ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಲ್ಲದೆ, ಹತ್ತಿರದಲ್ಲಿ ಮತ್ತೊಂದು ಬೈಕ್​ನಲ್ಲಿ ಸಾಗುತ್ತಿದ್ದ ಇನ್ನಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

    ನಾಲ್ಕು ವರ್ಷದ ಮಗಳನ್ನು ಕೊಂದು ನೇಣು ಹಾಕಿಕೊಂಡ 26 ವರ್ಷದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts