More

    800ಕೆಜಿ ಸಗಣಿ ಕಳ್ಳತನ! ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

    ರಾಯ್​ಪುರ: ಚಿನ್ನ, ಬೆಳ್ಳಿ, ಹಣವನ್ನೆಲ್ಲ ಕಳ್ಳತನ ಮಾಡುವುದನ್ನು ನೋಡಿರುತ್ತೀರಿ. ಆದರೆ ಇದೊಂದು ಗ್ರಾಮದಲ್ಲಿ ಹಸುವಿನ ಸಗಣಿಯನ್ನೇ ಕಳ್ಳತನ ಮಾಡಲಾಗಿದೆಯಂತೆ! ಒಂದೇ ರಾತ್ರಿಯಲ್ಲಿ ಬರೋಬ್ಬರಿ 800 ಕೆಜಿ ಸಗಣಿ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸ್ ಪ್ರಕರಣವೂ ದಾಖಲಾಗಿದೆ.

    ಚತ್ತೀಸ್​ಗಢದ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಇಂತಹ ಕಳ್ಳತನವಾಗಿದೆ. ಜೂನ್ 8ರ ರಾತ್ರಿ ಯಾರೋ ಕಳ್ಳರು ಪೂರ್ತಿ ಗ್ರಾಮದ ಎಲ್ಲ ಹಸುಗಳ ಸಗಣಿಯನ್ನು ಕದ್ದಿದ್ದಾರಂತೆ. ಈ ವಿಚಾರವಾಗಿ ಅದೇ ಗ್ರಾಮದ ಸಂಘಟನೆಯೊಂದರ ಮುಖ್ಯಸ್ಥ ಡಿಪ್ಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಾಮಧೇಯರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ.

    ಅಷ್ಟಕ್ಕೂ ಈ ಗ್ರಾಮದಲ್ಲಿ ಸಗಣಿ ಕಳ್ಳತನವಾಗಲು ಒಂದು ಕಾರಣವಿದೆಯಂತೆ. ಚತ್ತೀಸ್​ಗಢದಲ್ಲಿ 2020ರಲ್ಲಿ ಭೂಪೇಶ್ ಬಾಗೆಲ್ ಸರ್ಕಾರವು ಗೋಧನ್ ನ್ಯಾಯ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕೃಷಿಕರು, ಹೈನುಗಾರಿಕೆ ಮಾಡುವವರಿಂದ ಸಗಣಿಯನ್ನು ಕೆಜಿಗೆ 2 ರೂಪಾಯಿಯಂತೆ ಖರೀದಿಸಿ, ಅದರಿಂದ ಗೊಬ್ಬರ ತಯಾರಿಸಿ ಕಡಿಮೆ ಬೆಲೆಯಲ್ಲಿ ರೈತರಿಗೆ ಮಾರಾಟ ಮಾಡಲಾಗುವುದು. ಆ ಲೆಕ್ಕದಲ್ಲಿ 800 ಕೆಜಿ ಸಗಣಿ ಕದ್ದಿರುವ ಕಳ್ಳರು ಅದರಿಂದ 1600 ರೂಪಾಯಿ ಗಳಿಸಬಹುದು. (ಏಜೆನ್ಸೀಸ್)

    ‘ಕರೊನಾ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಬಹುದು’ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ

    ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದಾಗಿ ನಡೆದೇ ಹೋಯಿತು ಭಯಾನಕ ಕೊಲೆ! ತಲೆ ಮೇಲೆ ಕಲ್ಲು ಎತ್ತಾಕಿದ್ದ ಆರೋಪಿಗಳು ಅಂದರ್

    ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts