More

    ವದಂತಿಗಳಿಗೆ ಕಿವಿಗೊಡಬೇಡಿ, ಕರೊನಾ ಲಸಿಕೆ ಉಚಿತವಾಗಿ ದೊರೆಯಲಿದೆ: ಆರೋಗ್ಯ ಸಚಿವ ಹರ್ಷವರ್ಧನ್​

    ನವದೆಹಲಿ: ಕರೊನಾ ಲಸಿಕೆ ಕುರಿತಾದ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​, ದೇಶಾದ್ಯಂತ ಕರೊನಾ ಲಸಿಕೆ ಉಚಿತವಾಗಿ ದೊರೆಯಲಿದೆ ಎಂದು ಭರವಸೆ ನೀಡಿದರು.

    ಶನಿವಾರ ದೇಶಾದ್ಯಂತ ನಡೆದ ಕರೊನಾ ಲಸಿಕೆ ಟ್ರಯಲ್ಸ್ ಪರಿಶೀಲನೆಗಾಗಿ ದೆಹಲಿಯ ಗುರು ತೇಗ್​ ಬಹದೂರ್ (ಜಿಟಿಬಿ) ಆಸ್ಪತ್ರೆಗೆ ಭೇಟಿ ನೀಡಿ ಹರ್ಷವರ್ಧನ್​ ಮಾತನಾಡಿದರು. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಖಚಿತಪಡಿಸಿಕೊಳ್ಳುವುದೇ ನಮ್ಮ ಆದ್ಯತೆಯಾಗಿದೆ. ಪೊಲಿಯೋ ರೋಗನಿರೋಧಕ ಸಮಯದಲ್ಲಿ ದೇಶದಲ್ಲಿ ಹಲವಾರು ವದಂತಿಗಳು ಹರಡಿದವು. ಆದರೂ ಜನರು ಪೊಲಿಯೋ ಲಸಿಕೆ ಹಾಕಿಸಿಕೊಂಡು ಭಾರತವನ್ನು ಪೊಲಿಯೋ ಮುಕ್ತ ಮಾಡಿದರು. ಕೇವಲ ದೆಹಲಿಗೆ ಮಾತ್ರವಲ್ಲ. ಇಡೀ ದೇಶಾದ್ಯಂತ ಉಚಿತವಾಗಿ ಕರೊನಾ ಲಸಿಕೆ ದೊರೆಯಲಿದೆ ಎಂದರು.

    ಇದನ್ನೂ ಓದಿ: ನಿಮ್ಮ ಬಳಿ 1 ರೂಪಾಯಿ ನೋಟಿದೆಯಾ? ಹಾಗಿದ್ರೆ ಲಕ್ಷ ಲಕ್ಷ ಸಿಗಬಹುದು ಇಲ್ನೋಡಿ..!

    ಮೊದಲ ಹಂತದ ಲಸಿಕೆಯಲ್ಲಿ ದೇಶಾದ್ಯಂತ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಕರೊನಾ ವಾರಿಯರ್ಸ್​ ಸೇರಿದಂತೆ ಹೆಚ್ಚಿನ ಆದ್ಯತೆಯ ಫಲಾನುಭವಿಗಳಿಗೆ ದೇಶಾದ್ಯಂತ ನೀಡಲಾಗುವುದು ಎಂದು ಇದಕ್ಕೂ ಮುನ್ನ ಟ್ವೀಟ್​ ಮೂಲಕವೂ ತಿಳಿಸಿದ್ದಾರೆ.

    ಇನ್ನು ಕರೊನಾ ಲಸಿಕೆ ಟ್ರಯಲ್​ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಭಾಗಗಳಲ್ಲಿ ನಡೆಯುತ್ತಿದೆ. ಮೊದಲು ಲಸಿಕೆ ತೆಗೆದುಕೊಳ್ಳಲು ಬಂದ ವ್ಯಕ್ತಿ ವಿವರವನ್ನು ಆನ್​ಲೈನ್​ನಲ್ಲಿ ದಾಖಲು ಮಾಡಿ, ಅದಾದ ಬಳಿಕ ಎಸ್​ಎಂಎಸ್ ಮೂಲಕ ಟೈಂ ಸೆಡ್ಯೂಲ್ ನಿಗದಿ ಮಾಡಲಾಗುತ್ತದೆ. ನಂತರ ಇಂಜಕ್ಷನ್​ ಕೊಡಲಾಗುತ್ತದೆ. ಅರ್ಧಗಂಟೆ ನಿಗಾದಲ್ಲಿ ಇಡಲಾಗುತ್ತದೆ. ಅದಾದ ನಂತರ ಅಂತಿಮ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತದೆ. (ಏಜೆನ್ಸೀಸ್​)

    ಇದನ್ನೂ ಓದಿ: ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

    ಬೆಳಗಾವಿಯಲ್ಲಿ ಕರೊನಾ ಲಸಿಕೆ ಟ್ರಯಲ್ಸ್ ಯಶಸ್ವಿ!

    24ರ ಯುವತಿ ಜತೆ ಮದುವೆಯಾಗಿ ಖುಷಿಯಾಗಿದ್ದ ಬೆನ್ನಲ್ಲೇ 54ರ ಫಾಸ್ಟರ್​ಗೆ ಶಾಕ್​!

    ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts