More

    ವರದಿ ಇದ್ದರಷ್ಟೇ ಅಧಿವೇಶನಕ್ಕೆ ಪ್ರವೇಶ: ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯ

    ಬೆಂಗಳೂರು: ಸೆ.21ರಿಂದ ನಡೆಯುವ ವಿಧಾನಮಂಡಲ ಕಲಾಪದಲ್ಲಿ ಪಾಲ್ಗೊಳ್ಳುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿ ಮತ್ತು ಸಚಿವಾಲಯ ಸಿಬ್ಬಂದಿಗೆ ಕರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಖಚಿತಪಡಿಸಿದ್ದಾರೆ.

    ವಿಧಾನಸಭೆ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ 72 ಗಂಟೆಗಳ ಮುನ್ನ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿ, ವರದಿ ಇಟ್ಟುಕೊಂಡಿರಬೇಕು. ಇಲ್ಲಿಗೆ ಬಂದ ಬಳಿಕ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್ ಬಳಕೆ, ಫೇಸ್​ಶೀಲ್ಡ್ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಸೆ.18ರಂದು ಅಧಿಕಾರಿ, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಧಾನಸೌಧದಲ್ಲಿ ಟೆಸ್ಟ್ ನಡೆಸಲಾಗುತ್ತದೆ.

    ಇದನ್ನೂ ಓದಿ: ಗಾಂಜಾ ಗಮ್ಮತ್ತಿಗೆ ತೆಲಂಗಾಣ ಮಹಾಲಿಂಕ್

    ಶಾಸಕರು, ಸಚಿವರು ತಾಲೂಕು ಅಥವಾ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡಿಸಲು ಅವಕಾಶ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಈ ಬಾರಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಸಭಾಂಗಣದ ಆಸನಗಳ ಮಧ್ಯೆ ಪಾರದರ್ಶಕ ಶೀಟ್ ಹಾಕಿ ವಿಭಜಿಸಲಾಗಿದೆ ಎಂದು ಹೇಳಿದರು.

    ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts