More

    video/ ಕೋವಿಡ್​ ವಾರ್ಡ್​ಗೆ ಎಂಟ್ರಿ ಕೊಟ್ಲು ‘ಮಸ್ತ್ ಮಸ್ತ್ ಹುಡುಗಿ…’ ವಿಡಿಯೋ ವೈರಲ್

    ಬಳ್ಳಾರಿ: ಕೋವಿಡ್​ ವಾರ್ಡ್​ನಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭರ್ಜರಿಯಾಗಿ ಡಾನ್ಸ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ‘ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿ ರೋ…’ ಎಂದು ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.

    ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋದನ್ನು ಬಿಟ್ಟು ಡಾನ್ಸ್ ಮಾಡೋದಾ? ಎಂದು ಹುಬ್ಬೇರಿಸಬೇಡಿ. ಇದುವರೆಗೂ ಕರೊನಾ ಮಣಿಸುವ ಹೋರಾಟದಲ್ಲಿ ನಿರತವಾಗಿದ್ದ ಕೆಲ ಸಿಬ್ಬಂದಿಯೇ ಈ ಡಾನ್ಸ್ ಮಾಡಿರೋದು. ಸದ್ಯ ಅವರು ಚಿಕಿತ್ಸೆ ನೀಡೋಕೆ ಆಗಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಿದ್ದು, ಬಳ್ಳಾರಿ ನಗರದ ವಿಮ್ಸ್ ದಂತ ವೈದ್ಯಕೀಯ ಕಾಲೇಜಿನ ಕೋವಿಡ್​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿರಿ video/ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…’ ಹಾಡಿಗೆ ಕುಣಿದು ಕುಪ್ಪಳಿದ ಕರೊನಾ ಸೋಂಕಿತರು

    ಕೋವಿಡ್ ಸೋಂಕಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೃತ್ಯ ಮಾಡುವ ಮೂಲಕ ಮನೋಲ್ಲಾಸ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಚಿತ್ರದ ‘ಮಸ್ತ್ ಮಸ್ತ್ ಹುಡುಗಿ ಬಂದ್ಲು…’ ಹಾಗೂ video/ ಕೋವಿಡ್​ ವಾರ್ಡ್​ಗೆ ಎಂಟ್ರಿ ಕೊಟ್ಲು 'ಮಸ್ತ್ ಮಸ್ತ್ ಹುಡುಗಿ...' ವಿಡಿಯೋ ವೈರಲ್ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಾಪುರಂಲೊ’ ಚಿತ್ರದ ಹಾಡಿಗೆ ಭರ್ಜರಿ ನೃತ್ಯ ಮಾಡಿದ ಸೋಂಕಿತ ಸಿಬ್ಬಂದಿ, ತಮ್ಮಲ್ಲಿನ ಕಲೆ ಪ್ರದರ್ಶಿಸುವ ಜತೆಗೆ ಸೋಂಕಿನ ಬಗ್ಗೆ ಭಯ ಬಿಟ್ಟು ಧೈರ್ಯವಾಗಿ ಇರಬೇಕು ಎಂಬ ಸಂದೇಶ ಸಾರಿದರು.

    ಮಂಡ್ಯದ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…’ ಹಾಡಿಗೆ ಹೆಜ್ಜೆ ಹಾಕುತ್ತ ಕಾಲ ಕಳೆಯುತ್ತಿದ್ದ ವಿಡಿಯೋ ಇತ್ತೀಗೆ ವೈರಲ್​ ಆಗಿತ್ತು.

    ಇದೀಗ ಕರೊನಾ ಸಂಕಷ್ಟದ ಸಮಯದಲ್ಲೂ ಬೇಸರ ಕಳೆಯಲು ಸೋಂಕಿತರು ಡಾನ್ಸ್ ಮಾಡುತ್ತ ಕಾಲಕಳೆಯುತ್ತಿದ್ದು, ಅವರ ಆತ್ಮವಿಶ್ವಾಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಕೋವಿಡ್​ ವಾರ್ಡ್​ನಲ್ಲಿ 'ಮಸ್ತ್ ಮಸ್ತ್ ಹುಡುಗಿ ಬಂದ್ಲು..!'

    ಕೋವಿಡ್​ ವಾರ್ಡ್​ನಲ್ಲಿ 'ಮಸ್ತ್ ಮಸ್ತ್ ಹುಡುಗಿ ಬಂದ್ಲು…'ಕರೊನಾ ಸೋಂಕಿತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಡಾನ್ಸ್ ಝಲಕ್ ಇದು. ಬಳ್ಳಾರಿಯ ವಿಮ್ಸ್ ದಂತ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು, ಉಪೇಂದ್ರ ಚಿತ್ರದ 'ಮಸ್ತ್ ಮಸ್ತ್ ಹುಡಗಿ ಬಂದ್ಲು' ಹಾಗೂ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಾಪುರಂಲೊ' ಚಿತ್ರದ ಹಾಡಿಗೆ ಭರ್ಜರಿ ನೃತ್ಯ ಮಾಡುತ್ತ ಮನೋಲ್ಲಾಸ ವ್ಯಕ್ತಪಡಿಸಿದರು. #Dance #Hospital #CovidWard

    Posted by Vijayavani on Sunday, July 19, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts