More

    ಕೋವಿಡ್ ವಾರ್ಡ್​ನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ… ತಕ್ಕ ಶಾಸ್ತಿ ಮಾಡಿದ ನರ್ಸ್​

    ಆಂಧ್ರಪ್ರದೇಶ: ಕೋವಿಡ್ ವಾರ್ಡ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್​ ಮೇಲೆ ಸೋಂಕಿತೆಯ ಮಗನೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪ್ರಕಾಶಂ ಜಿಲ್ಲೆಯ ಓಂಗಲೆ ಆರ್​ಐಎಂಎಸ್​​ ಆಸ್ಪತ್ರೆಯಲ್ಲಿ ನಡೆದಿದೆ.
    ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ 01 ರಂದು ಕೋವಿಡ್ ವಾರ್ಡ್​ನಲ್ಲಿ ತನ್ನ ದಿನ ನಿತ್ಯದ ಪಾಳಿ ಮುಗಿಸಿ ರಾತ್ರಿ 08 ಗಂಟೆ ವೇಳೆ ನರ್ಸ್​ ಮನೆಗೆ ತೆರಳಲು ಸಿದ್ದರಾಗಿದ್ದರು. ಈ ವೇಳೆ ಆರೋಪಿ ನರ್ಸ್ ಬಳಿ ತೆರಳಿ, ನೀನು ನನ್ನ ತಾಯಿಗೆ ಸರಿಯಾಗಿ ಮಾಸ್ಕ್ ಹಾಕಿಲ್ಲ ಎಂದು ವಾಗ್ವಾದ ನಡೆಸಿದ್ದಾನೆ.

    ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರ

    ನಂತರ ವಾಗ್ವಾದ ಜೋರಾಗಿದ್ದು, ಆರೋಪಿ ನರ್ಸ್​ ದೇಹದ ಖಾಸಗಿ ಭಾಗಕ್ಕೆ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕುಪಿತಗೊಂಡ ನರ್ಸ್​ ಆರೋಪಿ ಕೆನ್ನೆಗೆ ಬಾರಿಸಿದ್ದಾರೆ. ನಂತರ ಜಗಳ ಜೋರಾಗಿದ್ದು, ಅಕ್ಕ-ಪಕ್ಕದ ವಾರ್ಡ್​ನವರು ಬಂದು ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನರ್ಸ್​ ನೀಡಿರುವ ದೂರಿನ ಪ್ರಕಾರ, ಆರೋಪಿ ಮೇಲೆ ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

    ದುಬೈನಿಂದ ಬಂದವನ ಬ್ಯಾಗ್ ಕಳ್ಳತನ… ಆರೋಪಿಗಳ ಬಂಧನದಿಂದ ಹೊರಬಿತ್ತು ಮತ್ತಷ್ಟು ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts