More

    ಕೋವಿಡ್​ ವಿರುದ್ಧ ವಿಶ್ವದ ಹೋರಾಟ, ಸೋಂಕು ಅಂಟಿಸಿಕೊಳ್ಳಲು ಇಲ್ಲಿ ಚೆಲ್ಲಾಟ!

    ನವದೆಹಲಿ: ವಿಶ್ವವನ್ನೇ ಬಾಧಿಸುತ್ತಿರುವ ಕೋವಿಡ್​-19 ಮಾರಿ ನಮ್ಮ ಮನೆಗೆ ಹೊಕ್ಕುವುದು ಬೇಡ ಎಂದು ಜನರು ಆಶಿಸುತ್ತಿದ್ದಾರೆ. ಇದಕ್ಕಾಗಿ ಅವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಮಾತ್ರ ಯಾರಿಗೆ ಮೊದಲು ಕರೊನಾ ಸೋಂಕು ಹರಡುತ್ತದೆ ಎಂಬ ಸ್ಪರ್ಧೆ ಏರ್ಪಡಿಸಿ, ಸೋಂಕು ಅಂಟಿಸಿಕೊಳ್ಳುತ್ತಿದ್ದಾರೆ.

    ಅಮೆರಿಕದ ಅಲ್ಬಾಮಾ ನಗರದ ವಿವಿಧ ಕಾಲೇಜುಗಳು ಇಂಥ ಚೆಲ್ಲಾಟದಲ್ಲಿ ತೊಡಗಿದ್ದಾರೆ. ಇದನ್ನು ಖಚಿತಪಡಿಸಿರುವ ಟಸ್ಕಲೂಸಾ ನಗರದ ಕೌನ್ಸಿಲರ್​ ಸೋನ್ಯಾ ಮೆಕ್​ಕಿನಸ್ಟ್ರಿ, ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಸೋಂಕು ಅಂಟಿಸಿಕೊಳ್ಳಲೆಂದೇ ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ಈ ಪಾರ್ಟಿಗಳಲ್ಲಿ ಯಾರು ಮೊದಲು ಸೋಂಕಿಗೆ ಒಳಗಾಗುತ್ತಾರೆ ಎಂದು ಪರಸ್ಪರ ಸ್ಪರ್ಧೆಗೆ ಇಳಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ಪಾರ್ಟಿ ಸಂಘಟಕರು ಪಾರ್ಟಿಗಳಿಗೆ ಕರೊನಾ ಸೋಂಕಿತರನ್ನು ಆಹ್ವಾನಿಸುತ್ತಿದ್ದಾರೆ. ಜತೆಗೆ ಒಂದು ಬೋಗಣಿಯಲ್ಲಿ ಹಣವನ್ನು ಹಾಕುತ್ತಾರೆ. ಯಾರಿಗೆ ಮೊದಲು ಸೋಂಕು ತಗುಲುತ್ತದೋ, ಬೋಗಣಿಯಲ್ಲಿ ಸಂಗ್ರಹವಾಗಿರುವ ಹಣ ಆ ವ್ಯಕ್ತಿಯದ್ದಾಗುತ್ತದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಸೋಂಕಿತರ ಸಂಪರ್ಕವೇ ಇಲ್ಲದಿದ್ರೂ ಕರೊನಾ ಸೋಂಕು

    ಇದು ಹುಚ್ಚುತನದ ಪರಮಾವಧಿ. ಇಡೀ ವಿಶ್ವವೇ ಕೋವಿಡ್​-19 ಪಿಡುಗಿನ ವಿರುದ್ಧ ಹೋರಾಡುತ್ತಿದೆ. ಅದನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ. ಇಂಥದ್ದರಲ್ಲಿ ಇವರೆಲ್ಲರೂ ಹೀಗೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಕರೊನಾ ಅಂಟಿಸಿಕೊಳ್ಳುವ ಪಾರ್ಟಿಗಳನ್ನು ಅಲ್ಬಾಮಾದಲ್ಲಿ ಏರ್ಪಡಿಸಲಾಗುತ್ತಿದೆ ಎಂಬ ಸಂಗತಿಯನ್ನು ಮೊದಮೊದಲು ಯಾರೂ ನಂಬಿರಲಿಲ್ಲ. ಆದರೆ, ಟಸ್ಕಲೂಸಾ ಅಗ್ನಿಶಾಮಕದಳದ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಿದಾಗ ಇದು ನಿಜ ಎಂಬುದು ಗೊತ್ತಾಯಿತು. ವೈದ್ಯರು ಅಷ್ಟೇ ಅಲ್ಲ, ಸರ್ಕಾರಿ ಅಧಿಕಾರಿಗಳು ಕೂಡ ಇದನ್ನು ನಂತರ ಖಚಿತಪಡಿಸಿದರು ಎನ್ನಲಾಗಿದೆ. ಆದರೆ ಈ ವಿದ್ಯಾರ್ಥಿಗಳ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

    ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ, ಇನ್ನೇನಿದ್ದರೂ ಅಭಿವೃದ್ಧಿ ಪರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts