More

    18 ಗ್ರಾಪಂ ಸೀಲ್‌ಡೌನ್

    ಮಂಗಳೂರು: ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಇರುವ 18 ಗ್ರಾಪಂಗಳನ್ನು ಸೀಲ್‌ಡೌನ್ ಮಾಡಲು ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಈ ಹಿಂದೆಯೇ ಪಾಸಿಟಿವಿಟಿ ದರ ಕಡಿಮೆ ಮಾಡುವ ಉದ್ದೇಶದಿಂದ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿತ್ತು. ಯಾವೆಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಹೆಚ್ಚಿದೆ ಎಂಬ ಬಗ್ಗೆ ಗ್ರಾಪಂ ಟಾಸ್ಕ್‌ಫೋರ್ಸ್‌ಗಳು ಜಿಲ್ಲಾಧಿಕಾರಿಗೆ ನೀಡಿರುವ ಪ್ರಸ್ತಾವದಂತೆ ಈ ಸೀಲ್‌ಡೌನ್ ಘೋಷಣೆ ಮಾಡಲಾಗಿದೆ.

    ಜೂ.14ರ ಬೆಳಗ್ಗೆ 9ಗಂಟೆಯಿಂದ 21ರ ಬೆಳಗ್ಗೆ 9 ಗಂಟೆವರೆಗೆ 7 ದಿನಗಳ ಕಾಲ ಸೀಲ್‌ಡೌನ್ ಇರಲಿದೆ. ಸಂಬಂಧಿಸಿದ ಕಾರ್ಯ ಪಡೆಗಳು ಸೀಲ್‌ಡೌನ್ ಮಾಡಲು ಕ್ರಮ ಜರಗಿಸಬೇಕು, ಕೆಲ ವಿನಾಯಿತಿ ಹೊರತುಪಡಿಸಿ ಉಳಿದಂತೆ ಗ್ರಾಮಕ್ಕೆ ಒಳಪ್ರವೇಶ, ನಿರ್ಗಮನಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಆ ಗ್ರಾಪಂ ವ್ಯಾಪ್ತಿಯಲ್ಲಿ ಅವಶ್ಯಕತೆ ಆಧರಿಸಿ ಸಾರ್ವಜನಿಕರಿಗೆ ಪಾವತಿ ಆಧಾರದ ಮೇಲೆ ಅಗತ್ಯ ವಸ್ತು ಪೂರೈಕೆ ಮಾಡಲು ಕಾರ್ಯಪಡೆಗಳು ಕ್ರಮವಹಿಸಬೇಕು. ಸಂಬಂಧಪಟ್ಟ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಪಂಗಳಲ್ಲಿ ಮೇಲಿನ ಅಂಶ ಪಾಲನೆ ಮಾಡುತ್ತಿರುವ ಬಗ್ಗೆ ಮೇಲ್ವಿಚಾರಣೆ ವಹಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

    ವಿನಾಯಿತಿಗಳೇನು?: ಆಸ್ಪತ್ರೆಗಳು, ನರ್ಸಿಂಗ್ ಹೋಂ, ಕ್ಲಿನಿಕ್, ಕ್ಲಿನಿಕಲ್ ಲ್ಯಾಬ್, ಟೆಲಿಮೆಡಿಸಿನ್, ಜನೌಷಧ ಕೇಂದ್ರ, ರಕ್ತ ಸಂಗ್ರಹ ಕೇಂದ್ರಗಳು. ಕೆಎಂಎಫ್ ಹಾಲಿನ ಬೂತ್. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಗ್ಗೆ, ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹ, ರಾಜ್ಯ/ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್‌ಗಳು. ಅಗತ್ಯ ತುರ್ತು ವೈದ್ಯಕೀಯ ಸೇವಾ ವಾಹನ ಸಂಚಾರಕ್ಕೆ ಮಾತ್ರ ಅವಕಾಶ.ಪಡಿತರ ಅಂಗಡಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಪೌಷ್ಠಿಕ ಆಹಾರ ಉತ್ಪನ್ನ ಘಟಕಗಳು(ಶೇ.50 ಸಿಬ್ಬಂದಿ) , ಗೋಡಂಬಿ ಮತ್ತಿತರ ಆಹಾರ ಸಂಸ್ಕರಣಾ ಘಟಕಗಳು(ಶೇ.50 ಸಿಬ್ಬಂದಿಗಳೊಂದಿಗೆ)

    ಈ ಗ್ರಾಪಂಗಳಿಗೆ ಅನ್ವಯ: ಮಂಗಳೂರು ತಾಲೂಕಿನ ನೀರುಮಾರ್ಗ ಮತ್ತು ಕೊಣಾಜೆ, ಬೆಳ್ತಂಗಡಿಯ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯ್ಲ, ಉಜಿರೆ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಆರಂತೋಡು, ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಗ್ರಾಮಪಂಚಾಯಿತಿಗಳು ಸೀಲ್‌ಡೌನ್ ಆಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts