More

    ಧಾರವಾಹಿ ಕೆಲಸಗಳೂ ಸ್ಥಗಿತ: ಮೇ 10ರವರೆಗೆ ಸಮಸ್ಯೆ ಇಲ್ಲ

    ಬೆಂಗಳೂರು: ರೆಸಾರ್ಟ್​ಗಳಲ್ಲಿ ಕದ್ದುಮುಚ್ಚಿ ಸೀರಿಯಲ್ ಚಿತ್ರೀಕರಣ ಮಾಡಲಾಗುತ್ತಿದೆ, ನಾಲ್ಕೈದು ಧಾರಾವಾಹಿ ತಂಡಗಳು ಶ್ರೀರಂಗಪಟ್ಟಣ ಮತ್ತು ಚಿಕ್ಕಮಗಳೂರು ಕಡೆ ಹೋಗಿ ಚಿತ್ರೀಕರಣ ನಡೆಸುತ್ತಿವೆ … ಎಂಬ ಸುದ್ದಿಯೊಂದು ಮಂಗಳವಾರ ಹರಿದಾಡಿತ್ತು.

    ಕರೊನಾ ಲಾಕ್​ಡೌನ್ ಘೊಷಣೆ ಆದರೂ ಇದು ಸರಿಯೇ ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಮಾಹಿತಿ ನೀಡುವ ಜೀ ಕನ್ನಡ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಇಡೀ ರಾಜ್ಯ ಲಾಕ್​ಡೌನ್​ನಲ್ಲಿದೆ. ಇಂಥ ಸಮಯದಲ್ಲಿ ನಾವು ಸೀರಿಯಲ್ ಶೂಟಿಂಗ್ ಮಾಡುವುದು ಎಷ್ಟು ಸರಿ? ಸಮಾಜದಲ್ಲಿ ಜವಾಬ್ದಾರಿಯುತ ವಾಹಿನಿ ಆಗಿರುವುದರಿಂದ, ನಮಗೂ ಕಾಳಜಿ ಇದೆ. ಹಾಗಾಗಿ ಮಂಗಳವಾರವೇ ಎಲ್ಲ ಕಾರ್ಯಕ್ರಮಗಳ ಶೂಟಿಂಗ್ ಕೊನೆಯಾಗಿದೆ. ಕಲಾವಿದರು, ತಂತ್ರಜ್ಞರ ಆರೋಗ್ಯವೇ ನಮಗೆ ಮುಖ್ಯ’ ಎಂದಿದ್ದಾರೆ.

    ಅದೇ ರೀತಿ ಹಲವು ಸೀರಿಯಲ್​ಗಳ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ರಾಮ್ೕ ಸಹ ಸೀರಿಯಲ್ ಶೂಟಿಂಗ್ ಕೈಬಿಟ್ಟಿರುವುದಾಗಿ ಹೇಳುತ್ತಾರೆ. ‘ಸದ್ಯ ‘ಮಂಗಳಗೌರಿ ಮದುವೆ’, ‘ಗೀತಾ’, ‘ನಾಗಿಣಿ 2’, ‘ರುಕ್ಕು’ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಏಪಿಸೋಡ್ ಬ್ಯಾಂಕಿಂಗ್ ವಿಚಾರದಲ್ಲಿ ಸೇಫ್ ಆಗಿದ್ದೇವೆ. ತುಂಬ ಮುತುವರ್ಜಿ ವಹಿಸಿ ಶೂಟ್ ಮಾಡಿದ್ದೇವೆ. ಒಂದೇ ಒಂದು ಕೇಸ್ ನಮ್ಮ ಸೆಟ್​ನಲ್ಲಿ ಸಿಕ್ಕಿಲ್ಲ. ಮೇ 10ರವರೆಗೆ ಶೂಟಿಂಗ್ ಬಂದ್ ಮಾಡಿದ್ದೇವೆ’ ಎನ್ನುತ್ತಾರೆ. ಇನ್ನು, ಅದೇ ರೀತಿ ‘ಜೊತೆ ಜೊತೆಯಲಿ’ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್, ‘ಬೇರೆಯವರ ಜೀವನವನ್ನು ಇಂಥ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ. ಮೇ 10ರವರೆಗೆ ಕಾದು ನೋಡುತ್ತೇವೆ. ಈಗಾಗಲೇ ಮುಂದಿನ 15 ದಿನಕ್ಕೆ ಆಗುವಷ್ಟು ಏಪಿಸೋಡ್​ಗಳು ಇವೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಶೂಟಿಂಗ್. ಇಲ್ಲದಿದ್ದರೆ ಮುಂದೇನು ಅನ್ನೋದು ನನಗೂ ಗೊತ್ತಿಲ್ಲ’ ಎನ್ನುತ್ತಾರೆ.

    ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts