More

    ಮಹಿಳೆಯರಲ್ಲಿ ತಾಳ್ಮೆ ಜಾಸ್ತಿ

    ಎನ್.ಆರ್.ಪುರ: ಪುರುಷರಿಗಿಂತ ಮಹಿಳೆಯರು ಹೆಚ್ಚು ತಾಳ್ಮೆ, ಸಹನೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್. ರಾಯಣ್ಣನವರ್ ತಿಳಿಸಿದರು.

    ಭಾನುವಾರ ಸಿಂಸೆಯಲ್ಲಿ ಶ್ರೀ ಗಾಯತ್ರಿ ವಿಶ್ವ ಕರ್ಮ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಅಕ್ಕ, ತಂಗಿಯಾಗಿ ಎಲ್ಲ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಾಳೆ. ಎಲ್ಲ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಿದ್ದಾಳೆ. ಆದರೂ ಪುರುಷ ಪ್ರಧಾನ ಸಮಾಜಕ್ಕೆ ಮಹಿಳೆಯರ ಬಗ್ಗೆ ಸಮಾಧಾನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಮಹಿಳೆಯರು ಶಿಕ್ಷಣ ಪಡೆದು ಸ್ವತಂತ್ರವಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರುವಿನಂತೆ ಕಾಣುತ್ತಾಳೆ. ಇದು ಸರಿಯಲ್ಲ ಎಂದರು.
    ಅಗ್ರಹಾರದ ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ರಾಮಾಯಾಣ, ಮಹಾಭಾರತ ಹಾಗೂ ವೇದಗಳಲ್ಲೂ ಮಹಿಳೆಯರಿಗೆ ವಿಶೇಷ ಸ್ಥಾನ ಸಿಕ್ಕಿದೆ. ಹೆಣ್ಣು ಮಕ್ಕಳಿಗೆ ತಾಳ್ಮೆ ದೈವದತ್ತವಾಗಿ ಬಂದಿದೆ. ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತಾಳೆ. ಧಾರಾವಾಹಿಗಳಲ್ಲಿ ಹೆಣ್ಣನ್ನು ಖಳನಾಯಕಿಯಂತೆ ಬಿಂಬಿಸುತ್ತಿರುವುದರಿಂದ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಇಂಥ ಧಾರಾವಾಹಿಗಳು ಪ್ರಸಾರವಾಗಬಾರದು ಎಂದು ಹೇಳಿದರು.
    ಕುಷ್ಟ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಸೌಮ್ಯಾ, ನಾರ್ವೆ ಶ್ಯಾಮಲಾ, ಶೃಂಗೇರಿ ಮೇಲ್ಗಟ್ಟ ಕುಸುಮಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
    ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್ಯ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್, ರಶ್ಮಿ, ಪ್ರೇಮಾ, ಲಲಿತಾ, ಶಾಲಿನಿ, ಕವಿತಾ, ಟಿ.ಎಸ್.ಸೌಮ್ಯಾ, ಪಾರ್ವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts