More

    ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರಲಿದೆ ಕರೊನಾ ಔಷಧ!

    ಬೀಜಿಂಗ್: ಇದೇ ನವೆಂಬರ್ ವೇಳೆಗೆ ಚೀನಾದ ಔಷಧ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ತಜ್ಞ ಗುಯ್ಜನ್ ವು ತಿಳಿಸಿದ್ದಾರೆ.

    ಈಗಾಗಲೇ ನಾಲ್ಕು ಔಷಧಗಳು ಮೂರನೇ ಹಂತದ ಪ್ರಯೋಗವನ್ನು ಆರಂಭಿಸಿವೆ. ಅದರಲ್ಲಿ ಮೂರಕ್ಕೆ ತುರ್ತು ಬಳಕೆಯ ಅನುಮತಿ ನೀಡಲಾಗಿದೆ. ಅದರಲ್ಲಿ ಒಂದಾದರೂ ಔಷಧ ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲಿಂದ ಭಾರತ ಸೇರಿದಂತೆ ಇತರ ದೇಶಗಳು ಆ ಔಷಧವನ್ನು ಮುಕ್ತವಾಗಿ ಮತ್ತು ಶೀಘ್ರವಾಗಿ ಆಮದು ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!

    ಸಾವಿಗೆ ಸೈಟೋಕಿನ್ ಕಾರಣ?: ಈ ನಡುವೆ, ಕರೊನಾ ಸೋಂಕಿತರ ಸಾವಿಗೆ ಯಾವ ನಿರ್ದಿಷ್ಟ ಅಂಶ ಕಾರಣ ಎಂಬುದರ ಬಗ್ಗೆ ವಿಜ್ಞಾನಿಗಳು ಬೆಳಕು ಚೆಲ್ಲಿದ್ದಾರೆ. ದೇಹದಲ್ಲಿ ಉತ್ಪತ್ತಿಯಾಗುವ ಸೈಟೋಕಿನ್‌ನಿಂದಾಗಿ ಸೋಂಕಿತರು ಸಾವನ್ನಪ್ಪುತ್ತಾರೆ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಸೈಟೋಕಿನ್ ಕಣಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಮತ್ತು ಉರಿಯೂತದ ಪ್ರತಿಕ್ರಿಯೆಯನ್ನು ಮಾರ್ಪಾಡು ಪಡಿಸುತ್ತವೆ. ಆದರೆ ಒಂದೇ ಸಮಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೈಟೋಕಿನ್ ಉತ್ಪತ್ತಿಯಾದಾಗ ಅದು ಉರಿಯೂತ ಹೆಚ್ಚಿಸಬಲ್ಲದು ಮತ್ತು ಸಾವಿಗೆ ಕಾರಣವಾಗಬಲ್ಲದು. ಇದುವರೆಗೆ ಕರೊನಾ ಸೋಂಕಿನಿಂದಾಗಿ ಮೃತರಾದವರ ದೇಹದಲ್ಲಿನ ಸೈಟೋಕಿನ್ ಪ್ರಮಾಣವನ್ನು ಪರಿಶೀಲಿಸಿದಾಗ ಅದು ಹೃದಯ ಸ್ತಂಭನಕ್ಕೆ ಒಳಗಾದವರ ಸೈಟೋಕಿನ್ ಪ್ರಮಾಣಕ್ಕೆ ಸರಿಹೊಂದಿದೆ ಎಂದು ಹೇಳಿದ್ದಾರೆ. ಸೋಂಕಿನಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದವರಿಗೆ ಆಂಟಿ ಸೈಟೋಕಿನ್ ಚಿಕಿತ್ಸೆ ನೀಡಿದರೆ ಮರಣ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ ಜರ್ನಲ್‌ನಲ್ಲಿ (ಜಾಮಾ) ಪ್ರಕಟಿಸಲಾದ ವರದಿಯಲ್ಲಿ ಹೇಳಲಾಗಿದೆ.

    ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts