More

    10 ಸಾವಿರ ಗಡಿ ದಾಟಿದ ಕೋವಿಡ್-19

    ಹಾವೇರಿ: ಜಿಲ್ಲೆಯಲ್ಲಿ ಶನಿವಾರ 58 ಜನರಿಗೆ ಕರೊನಾ ದೃಢಪಟ್ಟಿದ್ದು, 41 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 10,016 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 9,235 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 182 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 599 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 461 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 138 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬ್ಯಾಡಗಿ 4, ಹಾನಗಲ್ಲ 18, ಹಾವೇರಿ 13, ಹಿರೇಕೆರೂರು 8, ರಾಣೆಬೆನ್ನೂರ 12, ಸವಣೂರ 3 ಜನರಿಗೆ ಸೇರಿ ಒಟ್ಟು 58 ಜನರಿಗೆ ಶನಿವಾರ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ಶನಿವಾರ ಬ್ಯಾಡಗಿ 9, ಹಾನಗಲ್ಲ 2, ಹಾವೇರಿ 14, ಹಿರೇಕೆರೂರ 5, ರಾಣೆಬೆನ್ನೂರ 9, ಸವಣೂರ 2 ಜನರು ಸೇರಿ 41 ಜನರು ಬಿಡುಗಡೆ ಹೊಂದಿದ್ದಾರೆ.

    ಇಬ್ಬರ ಸಾವು: ಮೂಲತಃ ಗದಗ ಜಿಲ್ಲೆ ಬಿಜ್ಜೂರ ಗ್ರಾಮದಲ್ಲಿ ವಾಸವಾಗಿದ್ದ 64 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗುಲಿದ್ದರಿಂದ ಜಿಲ್ಲಾಸ್ಪತ್ರೆಗೆ ಅ. 5ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಅ. 16ರಂದು ಮೃತಪಟ್ಟಿದ್ದಾರೆ. ಹಾನಗಲ್ಲ ತಾಲೂಕು ಆಡೂರಿನ 70 ವರ್ಷದ ವೃದ್ಧೆ ಅ. 9ರಂದು ಆಸ್ಪತ್ರೆಗೆ ದಾಖಲಾಗಿ ಅ. 16ರಂದು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts