More

    ರಾಜ್ಯದಲ್ಲಿ ತಗ್ಗಿದ ಕರೊನಾ; ಕಳೆದ ವಾರದ ಇದೇ ದಿನಕ್ಕೆ ಹೋಲಿಸಿದರೆ ಗಣನೀಯ ಇಳಿಕೆ..

    ಬೆಂಗಳೂರು: ವಾರದ ಹಿಂದೆ ದೈನಂದಿನ ಕರೊನಾ ಪ್ರಕರಣ 50 ಸಾವಿರವನ್ನು ದಾಟಿದ್ದಲ್ಲದೆ, ಆ ಬಳಿಕ ಕೆಲವು ದಿನ 40 ಸಾವಿರದ ಆಸುಪಾಸಲ್ಲೇ ಇದ್ದು, ಕಳೆದೆರಡು ದಿನಗಳಿಂದ 30 ಸಾವಿರದ ಆಸುಪಾಸಿಗೆ ಬಂದಿತ್ತು. ಇಂದು ದೈನಂದಿನ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

    ರಾಜ್ಯದಲ್ಲಿ ಇಂದು ಹೊಸದಾಗಿ 28,264 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ 11,938 ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ 2,51,084 ಆಗಿದೆ. ಇನ್ನು ರಾಜ್ಯದಲ್ಲಿ ಹೆಚ್ಚೂಕಮ್ಮಿ ಇಂದು ಖಚಿತವಾದ ಪ್ರಕರಣಗಳಷ್ಟೇ (29,244) ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

    ಅಲ್ಲದೆ ರಾಜ್ಯದಲ್ಲಿನ ಪಾಸಿಟಿವಿಟಿ ದರದಲ್ಲೂ ಇಳಿಕೆಯಾಗಿದ್ದು, ಅದು ಶೇ. 16.38ಕ್ಕೆ ಕುಸಿದಿದೆ. ಅದಾಗ್ಯೂ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 68 ಮಂದಿ ಕರೊನಾದಿಂದಾಗಿ ಸಾವಿಗೀಡಾಗಿದ್ದಾರೆ. ಕಳೆದ ವಾರ ಇದೇ ದಿನ ರಾಜ್ಯದಲ್ಲಿನ ದೈನಂದಿನ ಸೋಂಕಿನ ಪ್ರಮಾಣ 50 ಸಾವಿರ ದಾಟಿತ್ತು. ಅಂದರೆ ಜ. 23ರಂದು ರಾಜ್ಯದಲ್ಲಿ ಹೊಸದಾಗಿ 50,210 ಮಂದಿಯಲ್ಲಿ ಕರೊನಾ ದೃಢಪಟ್ಟಿತ್ತು. ಪಾಸಿಟಿವಿಟಿ ದರ ಶೇ. 22.77 ಇದ್ದು, ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,57,796 ಇತ್ತು. ಒಂದೇ ವಾರದಲ್ಲಿ ಇವೆಲ್ಲವೂ ಗಣನೀಯ ಪ್ರಮಾಣದಲ್ಲಿ ತಗ್ಗಿವೆ.

    ಪ್ರಧಾನಿಗೇ ನೇರ ತಲುಪಿತು ಧರ್ಮಸ್ಥಳದ ಪ್ರಸಾದ; ಶಾಸಕರು ಮೋದಿಗೆ ನೀಡಿದರು ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರ

    ನಾಳೆ ಈ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಯಾವ ಕೆಲಸವೂ ಆಗಲ್ಲ; ನೌಕರರಿಂದ ರಾಜಕೀಯ ಪಕ್ಷದ ವಿರುದ್ಧ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts