More

    ಕೊವಿಡ್​-19 ರೋಗಿಗಳಿಗೆ ಇನ್ಮುಂದೆ ಚಿಕಿತ್ಸೆ ನೀಡುವುದಿಲ್ಲ ಎಂದ 42 ಖಾಸಗಿ ಆಸ್ಪತ್ರೆಗಳು

    ಹೈದರಾಬಾದ್​: ಕರೊನಾ ವೈರಸ್​ ಪ್ರಸರಣವನ್ನು ತಕ್ಕಮಟ್ಟಿಗೆ ನಿಯಂತ್ರಿಸಿದ್ದ ಹೈದರಾಬಾದ್​ನಲ್ಲಿ ಮತ್ತೆ ಗಣನೀಯವಾಗಿ ಏರಿಕೆ ಕಂಡಿದೆ. ಬುಧವಾರ ಒಂದೇ ದಿನ 800 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆಯನ್ನು ಸರಿಯಾಗಿ ಮಾಡಲೇಬೇಕು.

    ಆದರೆ ಇದೇ ಸಂದರ್ಭದಲ್ಲಿ ಸುಮಾರು 42 ಖಾಸಗಿ ಆಸ್ಪತ್ರೆಗಳು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ನರ್ಸ್​ಗಳ ಕೊರತೆಯಿದೆ. ಪ್ಯಾರಾಮೆಡಿಕಲ್​ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಹೇಳುತ್ತಿರುವ ಈ ಖಾಸಗಿ ಆಸ್ಪತ್ರೆಗಳು ಕೊವಿಡ್​-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿಲ್ಲ ಹಾಗೂ ಅವರನ್ನು ಅಡ್ಮಿಟ್​ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ, ಖಾಸಗಿ ಆಸ್ಪತ್ರೆ ವೈದ್ಯರಿಗೆ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ರೀತಿಯ ಇನ್ಶೂರೆನ್ಸ್​ ವ್ಯವಸ್ಥೆ ಘೋಷಣೆ ಮಾಡಿಲ್ಲ ಎಂದು ಬೇಸರವನ್ನೂ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿಗೊ ಬ್ಯಾನ್​; ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ರವಾನೆ

    ಇದುವರೆಗೂ ಹೈದರಾಬಾದ್​​ನಲ್ಲಿ ಒಟ್ಟು 56 ಖಾಸಗಿ ಆಸ್ಪತ್ರೆಗಳು ಕೊವಿಡ್​-19 ಸೋಂಕಿತರಿಗೆ ಬೆಡ್​ ವ್ಯವಸ್ಥೆ ಮಾಡಿ, ಸೂಕ್ತ ಚಿಕಿತ್ಸೆ ನೀಡುತ್ತಿದ್ದವು. ಅದರಲ್ಲೀಗ 42 ಆಸ್ಪತ್ರೆಗಳು ಹಿಂದೆ ಸರಿದಿವೆ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಸಿಬ್ಬಂದಿಯಿಲ್ಲ. ರಾಜ್ಯಸರ್ಕಾರ ನಮಗಾಗಿ ಇನ್ಶೂರೆನ್ಸ್​ ನೀಡಿಲ್ಲ ಎಂದು ತೆಲಂಗಾಣ ಆಸ್ಪತ್ರೆಗಳು ಮತ್ತು ನರ್ಸಿಂಗ್​ ಹೋಂ ಅಸೋಸಿಯೇಶನ್​ ಅಧ್ಯಕ್ಷ ಡಾ. ಅಶೋಕ್​ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ವಿರುದ್ಧ ‘ಚಹಾ’ ಹೋರಾಟ; ಏರ್​ಪೋರ್ಟ್​ ಅಧಿಕಾರಿಗಳ ಹೊಸ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts